ಜೂನ್ 14ರಂದು ರಾಜ್ಯಾದ್ಯಂತ ತೆರೆ ಕಂಡಿದ್ದ ಅನಿರುದ್ಧ್ ಜತ್ಕರ್ ಅಭಿನಯದ ‘ಚೆಫ್ ಚಿದಂಬರ’ ಚಿತ್ರ ಪ್ರೇಕ್ಷಕರ ಗಮನ ಸೆಳೆಯುವ ಮೂಲಕ ರಾಜ್ಯದಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಂದುಕೊಂಡಂತೆ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು, ಸತತ ಸೋಲಿನ ಬಳಿಕ ಅನಿರುದ್ಧ್ ಗೆ ಭರ್ಜರಿ ಯಶಸ್ಸು ಸಿಕ್ಕಿದೆ.
ಆನಂದ್ ರಾಜ್ ನಿರ್ದೇಶನದ ಈ ಚಿತ್ರವನ್ನು ದಮ್ತಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ರೂಪಾ ಡಿ ಎನ್ ನಿರ್ಮಾಣ ಮಾಡಿದ್ದು, ಅನಿರುದ್ಧ್ ಜತ್ಕರ್, ನಿಧಿ ಸುಬ್ಬಯ್ಯ ಮತ್ತು ರೆಚೆಲ್ ಡೇವಿಡ್ ಪ್ರಮುಖ ಪಾತ್ರದಲ್ಲಿದ್ದಾರೆ. ಶಿವಮಣಿ, ಶರತ್ ಲೋಹಿತಾಶ್ವ ಹಾಗೂ ಕೆ ಎಸ್ ಶ್ರೀಧರ್, ಉಳಿದ ಪಾತ್ರ ವರ್ಗದಲ್ಲಿದ್ದಾರೆ. ವಿಜೇತ್ ಚಂದ್ರ ಸಂಕಲನ, ನರಸಿಂಹಮೂರ್ತಿ ಸಾಹಸ ನಿರ್ದೇಶನ, ಉದಯ್ಲೀಲಾ ಛಾಯಾಗ್ರಹಣ, ಮಾಧುರಿ ಪರಶುರಾಮ್ ನೃತ್ಯ ನಿರ್ದೇಶನವಿದೆ. ರಿತ್ವಿಕ್ ಮುರುಳಿಧರ್ ಸಂಗೀತ ಸಂಯೋಜನೆ ನೀಡಿದ್ದಾರೆ.
Chef Chidambara: Running 2 Weeks Successfully! 🍽️ 🎬
The Delicious Hit of the Year is here! Don't miss out – catch it now at a theatre near you! 🌟👨🍳#ChefChidambara #MovieSuccess #DeliciousHit #WatchNow #a2music pic.twitter.com/K5D7Nso7Xp
— A2 Music (@A2MusicSouth) June 23, 2024