ದಾವಣಗೆರೆ: ಚಿರತೆ ದಾಳಿಗೆ 27 ಕುರಿಗಳು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹೊಳೆಸಿರಿಗೆರೆ ಅಡಿಕೆ ತೋಟದಲ್ಲಿ ನಡೆದಿದೆ.
ಅಡಿಕೆ ತೋಟದಲ್ಲಿ ಬೀಡು ಬಿಟ್ಟಿದ್ದ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ನಡೆಸಿದೆ. ಮೃತಕುರಿಗಳು ಚಿಕ್ಕೋಡಿ ತಾಲೂಕಿನ ಸದಲಗ ಗ್ರಾಮದ ಸೋಮಣ್ಣ ಎಂಬುವವರಿಗೆ ಸೇರಿದ್ದವು.
ತಡರಾತ್ರಿ ಚಿರತೆ ಕುರಿಗಳ ಮೇಲೆ ದಾಳಿ ನಡೆಸಿದ್ದು, ತೋಟದಲ್ಲಿ ಎಲ್ಲೆಂದರಲ್ಲಿ ಕುರಿಗಳು ಸಾವನ್ನಪ್ಪಿ ಬಿದ್ದಿವೆ. ಘಟನ ಅಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.