ಐಶ್ವರ್ಯಾ ಇನ್ನಷ್ಟು ಸಿನಿಮಾಗೆ ಸಹಿ ಮಾಡಲಿ, ನೀವು ಮಗಳನ್ನು ನೋಡಿಕೊಳ್ಳಿ; ಅಭಿಮಾನಿಯ ಸಲಹೆಗೆ ಅಭಿಷೇಕ್ ಖಡಕ್‌ ಉತ್ತರ

ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯ ರೈ ಬಚ್ಚನ್ ಅಭಿನಯವನ್ನು ಮೆಚ್ಚಿ ಟ್ವೀಟ್ ಮಾಡಿದ್ದ ಅಭಿಷೇಕ್ ಬಚ್ಚನ್ ಗೆ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಬಿಗ್ ಬಿ ಪುತ್ರ ನೀಡಿರುವ ಪ್ರತ್ಯುತ್ತರ ಗಮನ ಸೆಳೆದಿದೆ.

ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌ಗಳಿಗೆ ಸೂಕ್ತವಾದ ಪ್ರತ್ಯುತ್ತರ ನೀಡುತ್ತಾ ಹೆಸರುವಾಸಿಯಾದ ನಟ ಅಭಿಷೇಕ್ ಬಚ್ಚನ್ ನ ಮತ್ತೊಂದು ಕೌಂಟರ್ ವೈರಲ್ ಆಗಿದೆ.

ಪೊನ್ನಿಯಿನ್ ಸೆಲ್ವನ್ 2 ನಲ್ಲಿ ಐಶ್ವರ್ಯಾ ಅವರ ಅಭಿನಯಕ್ಕಾಗಿ ಅಭಿಷೇಕ್ ಬಚ್ಚನ್ ಹೊಗಳುತ್ತಾ,
ಪೊನ್ನಿಯಿನ್ ಸೆಲ್ವನ್ 2 ಸರಳವಾಗಿ ಅದ್ಭುತವಾಗಿದೆ. ವರ್ಣಿಸಲು ಪದಗಳು ಸಿಗುತ್ತಿಲ್ಲ. ಇಡೀ ತಂಡಕ್ಕೆಅಭಿನಂದನೆಗಳು ಎಂದು ನಿರ್ದೇಶಕ ಮಣಿರತ್ನಂ ಸೇರಿದಂತೆ ಪಾತ್ರವರ್ಗದ ನಟ, ನಟಿಯರು, ಸಿಬ್ಬಂದಿಯನ್ನು ಶ್ವಾಘಿಸುತ್ತಾ ತಮ್ಮ ಪತ್ನಿ ಐಶ್ವರ್ಯ ಅವರ ನಟನೆಯನ್ನೂ ಅಭಿಷೇಕ್ ಕೊಂಡಾಡಿದ್ದಾರೆ.

ಶ್ರೀಮತಿ ಐಶ್ವರ್ಯ ರೈ ಬಚ್ಚನ್ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು “ನೀವು ಮಾಡಬೇಕಾದಂತೆ ! ಈಗ ಆಕೆ ಇನ್ನಷ್ಟು ಸಿನಿಮಾಗಳಿಗೆ ಸಹಿ ಮಾಡಲಿ ಮತ್ತು ನೀವು ಆರಾಧ್ಯ ಅವರನ್ನು ನೋಡಿಕೊಳ್ಳಿ” ಎಂದು ಬರೆದಿದ್ದಾರೆ.

ಅಭಿಷೇಕ್ ಈ ಪ್ರತಿಕ್ರಿಯೆಯನ್ನು ನಿರ್ಲಕ್ಷಿಸದೇ ಟ್ವಿಟರ್ ಬಳಕೆದಾರರಿಗೆ ಸೂಕ್ತವಾದ ಉತ್ತರವನ್ನು ನೀಡಿದ್ದಾರೆ. “ಅವರು ಸಹಿ ಮಾಡಲಿ ಸರ್, ಆಕೆಗೆ ಏನನ್ನೂ ಮಾಡಲು ನನ್ನ ಅನುಮತಿ ಅಗತ್ಯವಿಲ್ಲ. ವಿಶೇಷವಾಗಿ ಅವರು ಪ್ರೀತಿಸುವ ವಿಷಯ.” ಎನ್ನುವ ಮೂಲಕ ತಮ್ಮ ಪತ್ನಿಗೆ ತಾವು ಯಾವುದನ್ನೂ ಸೂಚಿಸುವುದಿಲ್ಲ ಅಥವಾ ಕಂಟ್ರೋಲ್ ಮಾಡುವುದಿಲ್ಲ ಎಂಬುದನ್ನ ಹೇಳಿದ್ದಾರೆ. ಅಭಿಷೇಕ್ ಬಚ್ಚನ್ ಅವರ ಈ ಪ್ರತ್ಯುತ್ತರ ವೈರಲ್ ಆಗಿದೆ.

https://twitter.com/SilamSiva/status/1652304568364195843?ref_src=twsrc%5Etfw%7Ctwcamp%5Etweetembed%7Ctwterm%5E1652305744086040577%7Ctwgr%5E7a0f70b210d0d3538b85af0c735efdb8089d3a69%7Ctwcon%5Es2_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fcheckoutabhishekbachchansbefittingreplytotrollwhoaskedhimtoletaishwaryaraiworkmore-newsid-n495077598

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read