ಶ್ರದ್ಧಾ ರೀತಿ ಮತ್ತೊಂದು ಭೀಕರ ಹತ್ಯೆ; ಹೆಂಡ್ತಿಯನ್ನು ಕೊಂದು ಶವದ ತುಂಡುಗಳನ್ನು ನೀರಿನ ಟ್ಯಾಂಕರ್ ಗೆ ಹಾಕಿದ್ದ ಪತಿ…!

ಶ್ರದ್ಧಾ ವಾಲ್ಕರ್ ರೀತಿಯ ಮತ್ತೊಂದು ಕೊಲೆ ಪ್ರಕರಣವು ಮುನ್ನೆಲೆಗೆ ಬಂದಿದ್ದು ಬೆಚ್ಚಿಬೀಳಿಸಿದೆ. ಈ ಬಾರಿ ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ದೇಹವನ್ನು ಅನೇಕ ತುಂಡುಗಳಾಗಿ ಕತ್ತರಿಸಿ ತನ್ನ ಮನೆಯ ನೀರಿನ ಟ್ಯಾಂಕ್‌ಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಿಂದ ದುರ್ವಾಸನೆ ಬರುತ್ತಿದ್ದಂತೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ ಅಪರಾಧ ಬೆಳಕಿಗೆ ಬಂದಿದೆ. ಸಕ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಕೊಳೆತ ಶವವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಕ್ರಿ ಪೊಲೀಸರು ಭಾನುವಾರ ತಡರಾತ್ರಿ ಉಸ್ಲಾಪುರದ ಮನೆಯೊಂದರ ನೀರಿನ ತೊಟ್ಟಿಯಿಂದ ಮಹಿಳೆಯ ಕೊಳೆತ ಶವವನ್ನು ಹೊರ ತೆಗೆದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ 1 ತಿಂಗಳ ಹಿಂದೆಯೇ ಮಹಿಳೆಯನ್ನು ಹತ್ಯೆ ಮಾಡಿ ಟ್ಯಾಂಕ್ ಗೆ ಹಾಕಿರುವುದು ಗೊತ್ತಾಗಿದೆ.

ಶವ ಪರೀಕ್ಷೆಯ ನಂತರ ಹೆಚ್ಚಿನ ವಿವರಗಳನ್ನು ಪಡೆಯಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನಿಖೆಯ ಫಲಿತಾಂಶಗಳ ಪ್ರಕಾರ, ಸಂತ್ರಸ್ತೆಯ ಪತಿ ಪವನ್ ಸಿಂಗ್ ಠಾಕೂರ್ ಪತ್ನಿಯ ಮೇಲಿನ ಅನುಮಾನದಿಂದ ಕೊಲೆ ಮಾಡಿ ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ ನಂತರ ಟ್ಯಾಂಕ್‌ಗೆ ಎಸೆದಿರಬಹುದು ಎಂದು ಅಧಿಕಾರಿ ಹೇಳಿದರು.

ಮೃತ ಮಹಿಳೆಯನ್ನು ಸತಿ ಸಾಹು ಎಂದು ಗುರುತಿಸಲಾಗಿದ್ದು, ಸಕ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಉಸ್ಲಾಪುರ ಪ್ರದೇಶದಲ್ಲಿ ಈ ಘೋರ ಅಪರಾಧ ನಡೆದಿದೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪತಿಯನ್ನು ವಶಕ್ಕೆ ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read