ಫ್ಲಾರಿಡಾದ ಕನಾವೆರಾಲ್ ಬಂದರಿನಲ್ಲಿ ಲಂಗರು ಹಾಕಿ ನಿಂತಿದ್ದ ರಾಯಲ್ ಕೆರಿಬ್ಬಿಯನ್ ಕ್ರೂಸ್ ಸಂಸ್ಥೆಯ ದೈತ್ಯ ಹಡಗೊಂದು ಬಿರುಗಾಳಿಗೆ ಸಿಲುಕಿದ ವಿಡಿಯೋವೊಂದು ವೈರಲ್ ಆಗಿದೆ.
ಹಡಗಿನಲ್ಲಿದ್ದ ಕುರ್ಚಿಗಳು ಹಾಗೂ ಪೀಠೋಪಕರಣಗಳು ಗಾಳಿಯ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿದ್ದು, ಅದಾಗ ತಾನೇ ತಮ್ಮ ಪ್ರವಾಸಕ್ಕೆಂದು ಹಡಗು ಹತ್ತಿದ್ದ ಪ್ರವಾಸಿಗರು ಗಲಿಬಿಲಿಗೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ.
ಇದೇ ವೇಳೆ, ಅಮೆರಿಕದ ಪಶ್ಚಿಮ ಮಧ್ಯ ಭಾಗದಲ್ಲಿ ಚಂಡಮಾರುತ ಹಾಗೂ ಭಾರೀ ಬಿರುಗಾಳಿ ಬೀಸುತ್ತಿದ್ದು, ಇಂಡಿಯಾನಾ ಹಾಗೂ ಅರ್ಕಾನ್ಸಾಸ್‌ನಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಡಜ಼ನ್‌ಗಟ್ಟಲೇ ಮನೆಗಳಿಗೆ ಹಾನಿಯಾಗಿದೆ.
https://twitter.com/CNN/status/1673511492975509504?ref_src=twsrc%5Etfw%7Ctwcamp%5Etweetembed%7Ctwterm%5E1673511492975509504%7Ctwgr%5E2dd083d4ffc9cb77e6dbd3d5fabe638be3b92660%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Fwatch-royal-caribbean-cruise-ship-hit-storm-florida-chairs-debris-fly-off-2398384-2023-06-27