ಬೆಂಗಳೂರು : ಆಗಸ್ಟ್ 23 ರಂದು ಚಂದ್ರಯಾನ -3 ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಭಾರತವು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿತು. ಈ ಸಾಧನೆಯು ಯುಎಸ್, ಚೀನಾ ಮತ್ತು ರಷ್ಯಾದ ನಂತರ ಯಶಸ್ವಿ ಚಂದ್ರನ ಲ್ಯಾಂಡಿಂಗ್ ಸಾಧಿಸಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿದೆ ಮತ್ತು ಚಂದ್ರನ ದಕ್ಷಿಣ ಧ್ರುವದಲ್ಲಿ ಈ ಸಾಧನೆ ಮಾಡಿದ ಮೊದಲ ರಾಷ್ಟ್ರವಾಗಿದೆ.
ಚಂದ್ರನ ಮೇಲೆ ಕಾರ್ಯಾಚರಣೆ ನಡೆಸುತ್ತಿರುವ ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಮತ್ತೊಂದು ವಿಡಿಯೋ ಸೆರೆಹಿಡಿದಿದ್ದು, ಪ್ರಮುಖವಾಗಿ ಎರಡು ಉದ್ದೇಶಗಳನ್ನು ಸಾಧಿಸಿವೆ ಎಂದು ಇಸ್ರೋ ಟ್ವೀಟ್ ಮಾಡಿದೆ.
ಚಂದ್ರಯಾನ-3 ಮಿಷನ್ ಉದ್ದೇಶಗಳಲ್ಲಿ ಸದ್ಯ 2 ಉದ್ದೇಶಗಳನ್ನು ಸಾಧಿಸಿದೆ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ ನ ಪ್ರದರ್ಶನವನ್ನು ಸಾಧಿಸಲಾಗಿದೆ.ಚಂದ್ರನ ಮೇಲೆ ರೋವರ್ ತಿರುಗುವ ಪ್ರದರ್ಶನವನ್ನು ಸಾಧಿಸಲಾಗಿದೆ,ಆಂತರಿಕ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಪೇಲೋಡ್ ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ ಟ್ವೀಟ್ ಮಾಡಿದೆ.
Chandrayaan-3 Mission:
Of the 3⃣ mission objectives,
🔸Demonstration of a Safe and Soft Landing on the Lunar Surface is accomplished☑️
🔸Demonstration of Rover roving on the moon is accomplished☑️
🔸Conducting in-situ scientific experiments is underway. All payloads are…
— ISRO (@isro) August 26, 2023
ಜುಲೈ 14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ -3 ಅನ್ನು ಉಡಾವಣೆ ಮಾಡಲಾಯಿತು. ಇದು ಆಗಸ್ಟ್ ೨೩ ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಸ್ಪರ್ಶಿಸಿತು.
Chandrayaan-3 Mission:
🔍What's new here?Pragyan rover roams around Shiv Shakti Point in pursuit of lunar secrets at the South Pole 🌗! pic.twitter.com/1g5gQsgrjM
— ISRO (@isro) August 26, 2023