BREAKING : 4 ವರ್ಷಗಳ ಚಂದನ್-ನಿವೇದಿತಾ ದಾಂಪತ್ಯ ಅಂತ್ಯ : ಕೋರ್ಟ್ ನಿಂದ ವಿಚ್ಚೇದನ ಮಂಜೂರು..!

ಬೆಂಗಳೂರು : 4 ವರ್ಷಗಳ ಚಂದನ್-ನಿವೇದಿತಾ ದಾಂಪತ್ಯ ಅಂತ್ಯಗೊಂಡಿದ್ದು, ಕೋರ್ಟ್ ವಿಚ್ಚೇದನ ಮಂಜೂರು ಮಾಡಿದೆ.

ಬೆಂಗಳೂರಿನ 2 ನೇ ಹೆಚ್ಚುವರಿ ಕೌಟುಂಬಿಕ ಕೋರ್ಟ್ ವಿಚ್ಚೇದನ ಮಂಜೂರು ಮಾಡಿ ಆದೇಶಿಸಿದೆ. ಮಗು ಮಾಡಿಕೊಳ್ಳುವ ವಿಚಾರಕ್ಕೆ ಇವರಿಬ್ಬರ ನಡುವೆ ದಾಂಪತ್ಯ ಕಲಹ ಉಂಟಾಗಿತ್ತು ಎನ್ನಲಾಗಿದೆ.
ಕನ್ನಡ ಬಿಗ್ ಬಾಸ್ ನಿಂದ ಆರಂಭವಾಗಿದ್ದ ಈ ಜೋಡಿಯ ಪ್ರೀತಿ ಬಳಿಕ ಮೈಸೂರು ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾಗೆ ಪ್ರಪೋಸ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಇಬ್ಬರ ಮದುವೆಗೆ ಎರಡೂ ಕುಟುಂಬದವರು ಒಪ್ಪಿದ್ದರು.

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರನ್ನು ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ಅಂತ ಎಲ್ಲರೂ ಕರೆಯುತ್ತಾರೆ. ಸಾಮಾಜಿಕ ಜಾಲತಾಣದಲ್ಲೂ ಈ ಜೋಡಿ ಬಹಳ ಸದ್ದು ಮಾಡಿತ್ತು. ಒಟ್ಟಿಗೆ ರೀಲ್ಸ್ ಮಾಡುತ್ತಾ ಜನರಿಗೆ ಸಖತ್ ಎಂಟರ್ ಟೈನ್ ಮೆಂಟ್ ನೀಡಿತ್ತು. ಆದ್ರೆ ಧಿಡೀರ್ ಆಗಿ ಈ ಜೋಡಿ  ವಿಚ್ಛೇದನಕ್ಕೆ ಅರ್ಜಿ ಹಾಕಿ ಇದೀಗ ಡೈವೋರ್ಟ್ ಕೂಡ ಪಡೆದಿದೆ ಎಂಬ ಸುದ್ದಿ ಅಚ್ಚರಿ ಉಂಟು ಮಾಡಿದೆ.

ವಿವಾಹದ ಬಳಿಕ ತಮ್ಮದೇ ಶೈಲಿಯ ರ್ಯಾಪ್ ಸಾಂಗ್ ಮೂಲಕ ಇನ್ನಷ್ಟು ಜನಪ್ರಿಯತೆ ಪಡೆದ ಚಂದನ್, ಪತ್ನಿ ನಿವೇದಿತಾಳ ಯೂಟ್ಯೂಬ್ ಚಾನಲ್ ನಲ್ಲಿಯೂ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಹೊರ ಪ್ರಪಂಚಕ್ಕೆ ಇಬ್ಬರೂ ಆತ್ಮೀಯವಾಗಿಯೇ ಇದ್ದರು. ಆದರೆ ಈಗ ಇಬ್ಬರೂ ದೂರಾಗಲಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಆಘಾತ ತಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read