ಡೈವೋರ್ಸ್ ಬಗ್ಗೆ ಖಚಿತಪಡಿಸಿದ ಚಂದನ್ ಶೆಟ್ಟಿ, ನಿವೇದಿತಾ ಗೌಡ

ಬೆಂಗಳೂರು: ಅಚ್ಚರಿ ನಿರ್ಧಾರ ಕೈಗೊಂಡು ವಿಚ್ಛೇದನ ಪಡೆದುಕೊಂಡ ಕ್ಯೂಟ್ ಕಪಲ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನದ ಬಗ್ಗೆ ಖಚಿತಪಡಿಸಿದ್ದಾರೆ.

ತಮ್ಮ ವಿಚ್ಛೇದನದ ಬಗ್ಗೆ ಇಬ್ಬರು ಮಾಹಿತಿ ಹಂಚಿಕೊಂಡಿದ್ದು, ನಮ್ಮ ದಾಂಪತ್ಯ ಜೀವನವನ್ನು ಕಾನೂನು ಬದ್ಧವಾಗಿ ಕೊನೆಗೊಳಿಸಿದ್ದೇವೆ. ಪರಸ್ಪರ ಒಪ್ಪಿಗೆಯಿಂದ ದಾಂಪತ್ಯ ಜೀವನ ಕೊನೆಗೊಳಿಸಿದ್ದೇವೆ. ಪ್ರತ್ಯೇಕ ಮಾರ್ಗ ಅನುಸರಿಸಿದರೂ ಒಬ್ಬರನ್ನು ಒಬ್ಬರು ಗೌರವಿಸುತ್ತೇವೆ ಎಂದು ವಿಚ್ಛೇದನದ ಕುರಿತಾಗಿ ತಿಳಿಸಿದ್ದಾರೆ

2020ರ ಫೆಬ್ರವರಿ 26ರಂದು ‘ಬಿಗ್ ಬಾಸ್’ ಖ್ಯಾತಿಯ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದಂಪತಿ, ಧ್ರುವ ಸರ್ಜಾ ದಂಪತಿ ಸೇರಿದಂತೆ ಸ್ಯಾಂಡಲ್ವುಡ್ ನ ಅನೇಕ ಸೆಲೆಬ್ರಿಟಿಗಳು, ಗಣ್ಯರು ಮದುವೆಗೆ ಆಗಮಿಸಿ ಶುಭ ಹಾರೈಸಿದ್ದರು. ಇಷ್ಟು ದಿನ ಅನ್ಯೋನ್ಯವಾಗಿದ್ದ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅಚ್ಚರಿ ನಿರ್ಧಾರ ಕೈಗೊಂಡು ಪರಸ್ಪರ ಒಪ್ಪಂದದ ಮೇರೆಗೆ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದಾರೆ.

https://www.facebook.com/photo/?fbid=1047287733424655&set=pcb.1047287763424652

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read