ಸಾಲದ ಹಣ ಕೊಡುತ್ತೇವೆಂದು ಕರೆದು ವೃದ್ಧನ ಬರ್ಬರ ಹತ್ಯೆ: ಚಿನ್ನಾಭರಣ ದೋಚಿ ಪರರಾರಿಯಾದ ದುಷ್ಕರ್ಮಿಗಳು

ಚಾಮರಾಜನಗರ: ವೃದ್ಧರೊಬರ ಬಳಿಯಿಂದ ಪಡೆದುಕೊಂಡಿದ್ದ ಸಾಲದ ಹಣವನ್ನು ವಾಪಾಸ್ ಕೊಡುವುದಾಗಿ ಹೇಳು ಅವರನ್ನು ಕರೆಸಿಕೊಂಡ ದುಷ್ಕರ್ಮಿಗಳು ವೃದ್ಧನನ್ನು ಕೊಲೆಗೈದು, ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಚಾಮರಾಜನಗರದ ಗುಂಡ್ಲು ಪೇಟೆಯ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಣಕಾಸು ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವೃದ್ಧ ಹೆಚ್.ಎಂ ಸ್ವಾಮಿ (73) ಕೊಲೆಯಾದ ವ್ಯಕ್ತಿ. ಪರಶಿವ ಮೂರ್ತಿ ರೆಂಬ ಆಟೋ ಚಾಲಕ ವೃದ್ಧನಿಂದ 20 ಸಾವಿರ ರೂಪಾಯಿ ಸಾಲವಾಗಿ ಹಣ ಪಡೆದಿದ್ದ. ಹಣ ವಾಪಾಸ್ ಕೇಳಿದರೆ ಕೊಡದೇ ಸತಾಯಿಸುತ್ತಿದ್ದ.

ವೃದ್ಧ ಸ್ವಾಮಿ ಅವರಿಗೆ ಚಿನ್ನದ ಮೇಲೆ ಭಾರಿ ವ್ಯಾಮೋಹ. ನಾಲ್ಕು ಉಂಗುರ, ಬ್ರೇಸ್ ಲೆಟ್, ಚೈನು ಹೀಗೆ ಮೈತುಂಬ ಒಡವೆಗಳನ್ನು ಧರಿಸ್ ಓಡಾಡುತ್ತಿದ್ದರು. ಸಾಲ ಮಾಡಿದ್ದ ಪರಶಿವನಿಗೆ ವೃದ್ಧನ ಮೈಮೇಲಿನ ಚಿನ್ನಾಭರಣಗಳು ಕಣ್ಣುಕುಕ್ಕಿತ್ತು. ಸಾಲದ ಹಣ ವಾಪಾಸ್ ಕೊಡುವುದಾಗಿ ಹೇಳು ವೃದ್ಧನನ್ನು ಕರೆದ ಪರಶಿವ, ತನ್ನ ಸ್ನೇಹಿತ ಸಿದ್ದರಾಜು ಹಾಗೂ ಮಹೇಶ್ ಜೊತೆ ಸೇರಿ ವೃದ್ಧನನ್ನು ಹತ್ಯೆಗೈದಿದ್ದಾನೆ. ಬಳಿಕ ವೃದ್ಧನ ಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಮನೆಯಿಂದ ಹೋದ ಪತಿ ನಾಪತ್ತೆಯಾಗಿರುವುದರಿಂದ ಕಂಗಾಲಾದ ಪತ್ನಿ ಅಮ್ಮಯ್ಯಬಾಯಿ ಬೇಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read