ಚಾಮರಾಜನಗರ: ಬೈಕ್ ನಲ್ಲಿ ತೆರಳುತ್ತಿದ್ದಾಗಲೇ ಪತಿ-ಪತ್ನಿ ನಡುವೆ ಜಗಳ ಶುರುವಾಗಿದ್ದು, ಕೋಪಗೊಂಡ ಪತಿ ಮಹಾಶಯ ನದಿಗೆ ಹಾರಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಲೆಗಾಲ ತಾಲೂಕಿನ ದಾಸನಪುರ ದಲ್ಲಿ ಈ ಘಟನೆ ನಡೆದಿದೆ. ಮಂಜುನಾಥ್ ನದಿಗೆ ಹಾರಿರುವ ವ್ಯಕ್ತಿ. ಮಂಜುನಾಥ್, ಪತ್ನಿ ರಾಜೇಶ್ವರಿ ಬೈಕ್ ನಲ್ಲಿ ತೆರಳುತ್ತಿದ್ದ. ಬೈಕ್ ಚಲಾಯಿಸುತ್ತಿದ್ದಾಗಲೇ ಗಂಡ-ಹೆಂಡತಿ ನಡಿವೆ ಕೌಟುಂಬಕ ವಿಚಾರವಾಗಿ ಜಗಳ ಶುರುವಾಗಿದೆ. ಗಲಾಟೆ ವೇಳೆ ತಾನು ಸತ್ತರೇ ನಿಮಗೆ ಬುದ್ಧಿ ಬರುತ್ತದೆ ಎಂದು ಗಲಾಟೆ ಮಾಡಿದ ಮಂಜುನಾಥ್, ಏಕಾಏಕಿ ಬೈಕ್ ನಿಂದ ಇಳಿದವನೇ ನದಿಗೆ ಹಾರಿದ್ದಾನೆ.
ಕಂಗಾಲಾದ ಪತ್ನಿ ರಾಜೇಶ್ವರಿ ಪತಿಯನ್ನು ರಕ್ಷಿಸಿವಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿರುವ ರಕ್ಷಣಾ ತಂಡ ನದಿಗೆ ಹಾರಿರುವ ಮಂಜುನಾಥ್ ಗಾಗಿ ಶೋಧ ನಡೆಸಿದ್ದಾರೆ.