ಸಿದ್ದಾರ್ಥ್ ಅಭಿನಯದ 40ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದ್ದು, ಈಗಾಗಲೇ ಬಹುತೇಕ ಕಲಾವಿದರ ಪರಿಚಯವನ್ನು ಮಾಡಲಾಗಿದೆ. ಸ್ಯಾಂಡಲ್ವುಡ್ನ ಪ್ರತಿಭಾವಂತ ನಟಿ ಚೈತ್ರ ಆಚಾರ್ ಕೂಡ ಅಭಿನಯಿಸುತ್ತಿದ್ದು, ಚಿತ್ರತಂಡ ಸ್ವಾಗತ ಕೋರಿದೆ. ಸಿದ್ದಾರ್ಥ್ ಸೇರಿದಂತೆ ಹಿರಿಯ ನಟ ಶರತ್ ಕುಮಾರ್, ದೇವಯಾನಿ, ಮೀತಾ ರಘುನಾಥ್ ಹಾಗೂ ಚೈತ್ರ ಆಚಾರ್ ಈ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಆಕ್ಷನ್ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ‘8 ತೊಟ್ಟಕ್ಕಲ್’ ನಿರ್ದೇಶಕ ಶ್ರೀ ಗಣೇಶ್ ಆಕ್ಷನ್ ಕಟ್ ಹೇಳಿದ್ದು, ಶಾಂತಿ ಟಾಕೀಸ್ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಪೂಜಾ ಸೆರೆಮನೆಯಲ್ಲಿ ಇತ್ತೀಚಿಗಷ್ಟೇ ಚಿತ್ರತಂಡ ಪೂಜೆ ಸಲ್ಲಿಸುವ ಮೂಲಕ ಶೂಟಿಂಗ್ ಪ್ರಾರಂಭಿಸಿದೆ.
https://twitter.com/ShanthiTalkies/status/1812465742694019442
https://twitter.com/ShanthiTalkies/status/1812788050176704775?ref_src=twsrc%5Etfw%7Ctwcamp%5Etweetembed%7Ctwterm%5E1812788050176704775%7Ctwgr%5E99eef451e6d11b5b75d7bc3d704b