ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸರಗಳ್ಳರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೈಕ್ ನಲ್ಲಿ ಬಂದ ಸರಗಳ್ಳರು ಮಹಿಳೆಯ ಕುತ್ತಿಗೆಗೆ ಲಾಂಗ್ ಇಟ್ಟು ಚಿನ್ನದ ಸರ ಕದ್ದೊಯ್ದ ಘಟನೆ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಈಶ್ವರಿ ನಗರದಲ್ಲಿ ನಡೆದಿದೆ.
ಉಷಾ ಹಾಗೂ ವರಲಕ್ಷ್ಮೀ ಎಂಬುವವರ ಚಿನ್ನದ ಸರವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಇಬರು ಮಹಿಳೆಯರು ಗಣೇಶ ಹಬ್ಬದ ಆರ್ಕೆಸ್ಟ್ರಾ ನೋಡಿಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಖದೀಮರು ಹಿಂದಿನಿಂದ ಬಂದು ಕತ್ತಿಗೆ ಲಾಂಗ್ ಇಟ್ಟು ಬೆದರಿಸಿದ್ದಾರೆ. ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದಾಗ ಆಕೆಯ ಬೆರಳು ಕಟ್ ಆಗಿದೆ. ಕತ್ತಲ್ಲಿದ್ದ ಚಿನ್ನದ ಸರ ದೋಚಿದ್ದಾರೆ. ಮತ್ತೋರ್ವ ಮಹಿಳೆಯ ಸರವನ್ನೂ ಕದ್ದು ಪರಾರಿಯಾಗಿದ್ದಾರೆ.
ಉಷಾ ಅವರ 10 ಗ್ರಾಂ ಚಿನ್ನದ ಸರ ಹಾಗೂ ವರಲಕ್ಷ್ಮೀ ಎಂಬುವವರ 45 ಗ್ರಾಂ ಚಿನ್ನದ ಸರ ಕಳುವಾಗಿದೆ. ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.