CET ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಪ್ರಮಾಣ ಪತ್ರ, ಅಂಕ ವಿವರ ಸಲ್ಲಿಕೆಗೆ ಅವಕಾಶ

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಅಂಕ ವಿವರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಸಿಇಟಿ ಬರೆದಿದ್ದರೂ ವಿಶೇಷ ಪ್ರವರ್ಗಗಳ ಪ್ರಮಾಣ ಪತ್ರ ಮತ್ತು ಸಂಬಂಧಿತ ದಾಖಲೆಗಳನ್ನು ಇದುವರೆಗೆ ಸಲ್ಲಿಸದಿರುವ ಅಭ್ಯರ್ಥಿಗಳು ಜೂನ್ 2ಡು ಅಥವಾ 6ರಂದು ಖುದ್ದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಭೇಟಿ ನೀಡಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಇದರೊಂದಿಗೆ ರಾಜ್ಯ ಪಠ್ಯಕ್ರಮ ಹೊರೆತುಪಡಿಸಿ ಬೇರೆ ಬೇರೆ ಪಠ್ಯ ಕ್ರಮಗಳ ಅಡಿಯಲ್ಲಿ 2023ರಲ್ಲಿ 12ನೇ ತರಗತಿ ಉತ್ತೀರ್ಣರಾಗಿ ಇದುವರೆಗೂ ತಮ್ಮ ಅಂಕಗಳ ವಿವರ ದಾಖಲಿಸದಿರುವವರಿಗೆ ಅನುಕೂಲವಾಗುವಂತೆ ಜೂನ್ 3ರ ಸಂಜೆ 4 ಗಂಟೆಯಿಂದ ಜೂನ್ 6ರಂದು ಸಂಜೆ 5:30ರ ವರೆಗೆ ಪ್ರಾಧಿಕಾರದ ಪೋರ್ಟಲ್ ತೆರೆಯಲಾಗುತ್ತಿದೆ. ಹೆಚ್ಚಿನ ವಿವರಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ http://kea.kae.nic.in ಗಮನಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read