ಸಿಇಟಿ ಸೀಟ್ ಬ್ಲಾಕಿಂಗ್ ಹಗರಣ ಬಯಲಿಗೆ: ಕೆಇಎ ಸಿಬ್ಬಂದಿ ಸೇರಿ 8 ಮಂದಿ ಅರೆಸ್ಟ್

ಬೆಂಗಳೂರು: ಸಿಇಟಿ ಮೂಲಕ ಪ್ರತಿಷ್ಠಿತ ಕಾಲೇಜುಗಳಲ್ಲಿ ಬಹು ಬೇಡಿಕೆಯ ಇಂಜಿನಿಯರಿಂಗ್ ಸೀಟು ಬ್ಲಾಕಿಂಗ್  ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(KEA) ಸಿಬ್ಬಂದಿ ಸೇರಿ ಎಂಟು ಜನರನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಿ 10 ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಸೀಟ್ ಬ್ಲಾಕಿಂಗ್ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಕೆಇಎ ಅಧಿಕಾರಿಗಳು ನವೆಂಬರ್ 13ರಂದು ದೂರು ನೀಡಿದ್ದರು.

ಅಂತಿಮ ಸುತ್ತಿನ ಆಯ್ಕೆ ಪ್ರಕ್ರಿಯೆ ಬಳಿಕ ಉಳಕೆಯಾಗುವ ಸರ್ಕಾರಿ ಕೋಟಾದ ಸೀಟುಗಳು ಕಾಲೇಜುಗಳ ಪಾಲಾಗುವುದರಿಂದ ಕೆಲವು ಖಾಸಗಿ ಕಾಲೇಜಿನ ಆಡಳಿತ ಮಂಡಳಿಯವರು ಈ ಸೀಟುಗಳನ್ನು ಹೆಚ್ಚಿನ ಶುಲ್ಕ ಕಟ್ಟಿಸಿಕೊಂಡು ಕಡಿಮೆ ರ್ಯಾಂಕ್ ಪಡೆದವರಿಗೆ ನೀಡುತ್ತಾರೆ. ಈ ಉದ್ದೇಶದಿಂದ ಕೆಲವು ಕಾಲೇಜಿನವರು ಸೀಟು ಅಗತ್ಯವಿಲ್ಲದ ಅಭ್ಯರ್ಥಿಗಳೊಂದಿಗೆ ಸೇರಿ ಕೊನೆಗೆ ಸುತ್ತಿನಲ್ಲಿ ಸೀಟು ಹಂಚಿಕೆ ಪಡೆದು ಕಾಲೇಜಿಗೆ ಸೇರ್ಪಡೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರಾಧಿಕಾರಕ್ಕೆ ಸಾರ್ವಜನಿಕರು ದೂರು ನೀಡಿದ್ದರು.

ಒಂದೇ ಐಪಿ ಅಡ್ರೆಸ್ ಬಳಸಿ ಸೀಟು ಬ್ಲಾಕಿಂಗ್ ಎಸಲಾಗಿದೆ ಎಂದು ಕೆಇಎ ಮಾಹಿತಿ ನೀಡಿದ್ದು, ಸತತ ಮೂರು ಸುತ್ತಿನ ಸೀಟು ಹಂಚಿಕೆಯ ನಂತರ 2625 ಅಭ್ಯರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯದ ಕಾರಣ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ಇವರಲ್ಲಿ ಕೆಲವರು ಶುಲ್ಕ ಕಟ್ಟಿರಲಿಲ್ಲ. ಕೆಲವರು ಶುಲ್ಕ ಪಾವತಿಸಿದ್ದರೂ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡಿರಲಿಲ್ಲ. ಬೇಡಿಕೆ ಇರುವ ಕಾಲೇಜುಗಳಲ್ಲಿನ 40 ರಿಂದ 90 ಸೀಟುಗಳನ್ನು ಬ್ಲಾಕ್ ಮಾಡಿದ್ದರು ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read