CET ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ಮಂಡಳಿ ಹೆಸರು ತಪ್ಪಾಗಿದ್ದರೂ ಅರ್ಜಿ ಸ್ವೀಕೃತ

ಬೆಂಗಳೂರು: ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಗಳಲ್ಲಿ ತಾವು ಓದಿದ ಶಾಲಾ ಶಿಕ್ಷಣ ಮಂಡಳಿಗಳಿಗೆ ಸಂಬಂಧಿಸಿದಂತೆ ತಪ್ಪಾಗಿದ್ದರೂ ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ರಮ್ಯಾ ತಿಳಿಸಿದ್ದಾರೆ.

ವಿದ್ಯಾರ್ಥಿಗಳ 12ನೇ ತರಗತಿ ಅಥವಾ ದ್ವಿತೀಯ ಪಿಯುಸಿ ನೋಂದಣಿ ಸಂಖ್ಯೆ ಆಧಾರದ ಮೇಲೆ ಅಂಕಗಳ ವಿವರಗಳನ್ನು ಪ್ರಾಧಿಕಾರ ಪಡೆದುಕೊಳ್ಳುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಒಂದೇ ಬಗೆಯ ಶಾಲಾ ಶಿಕ್ಷಣ ಮಂಡಳಿಯಲ್ಲಿ ಓದಿರಲಿ ಅಥವಾ ಹಲವು ಶಾಲಾ ಶಿಕ್ಷಣ ಮಂಡಳಿಗಳಲ್ಲಿ ಓದಿರಲಿ ಅದರಿಂದ ತೊಂದರೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಭ್ಯರ್ಥಿಗಳ ಸ್ಯಾಟ್ಸ್ ಡೇಟಾದಲ್ಲಿ CISE ಎಂದಿರಬೇಕಾದ ಕಡೆ CBSE ಎಂದು ತೋರಿಸುತ್ತಿದ್ದಲ್ಲಿ ಅಥವಾ ಅದಕ್ಕೆ ತದ್ವಿರುದ್ಧವಾಗಿ ತೋರಿಸುತ್ತಿದ್ದರೂ ವಿದ್ಯಾರ್ಥಿಗಳು ಆತಂಕಪಡಬೇಕಿಲ್ಲ. ಇದರಿಂದ ಅವರ ವ್ಯಾಸಂಗದ ವಿವರ ಅದಲು ಬದಲಾಗುವುದಿಲ್ಲ. ಅಲ್ಲದೆ, ಶಾಲೆಗಳಲ್ಲಿ ಸ್ಯಾಟ್ಸ್ ಡೇಟಾ ಅಲಭ್ಯತೆ, ವ್ಯಾಸಂಗ ಮಾಡಿದ ವರ್ಷಗಳ ಅಪೂರ್ಣ ಮಾಹಿತಿ, ಹಲವು ಶಿಕ್ಷಣ ಮಂಡಳಿಗಳಲ್ಲಿ ಓದಿದ್ದರೂ ಒಂದೇ ಒಂದು ಮಂಡಳಿಯ ನಮೂದು ಇತ್ಯಾದಿಗಳಿಂದ ಚಿಂತಿತರಾಗಬೇಕಿಲ್ಲ ಎಂದು ಅವರು ಹೇಳಿದ್ದಾರೆ.

2016 -17ಕ್ಕಿಂತ ಮೊದಲು ಯಾವುದೇ ಶಿಕ್ಷಣ ಮಂಡಳಿಯಡಿ 10ನೇ ತರಗತಿ ತೇರ್ಗಡೆಯಾಗಿದ್ದು, ಸ್ಯಾಟ್ಸ್ ನಂಬರ್ ಹೊಂದಿಲ್ಲದಿರುವ ಅಭ್ಯರ್ಥಿಗಳು ಕೂಡ ನಿರಾತಂಕವಾಗಿ ಸ್ಯಾಟ್ಸ್ ಸಂಖ್ಯೆ ಖಾಲಿ ಬಿಟ್ಟು ಸಿಇಟಿ ಅರ್ಜಿ ತುಂಬಬಹುದಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಸಕ್ತ ಸಾಲಿನ ಸಿಇಟಿ ಏಪ್ರಿಲ್ 18 ಮತ್ತು 19ರಂದು ನಡೆಯಲಿದ್ದು, ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಫೆಬ್ರವರಿ 20ರ ವರೆಗಿನ ಅವಧಿಯನ್ನು ಫೆಬ್ರವರಿ 23ರ ಸಂಜೆ 5:30ರ ವರೆಗೆ ವಿಸ್ತರಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read