ಬೆಂಗಳೂರು: ಯುಜಿ ಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟವಾಗಿದ್ದು, ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಆ.31ರಿಂದ ಸೆ.3ರವರೆಗೆ ನಡೆಯಲಿದೆ. ಆ.31ರಂದು ಭಾನುವಾರ ಇದ್ದು, ಅಂದು ಕೂಡ ಎಲ್ಲ ಸಂಬಂಧಪಟ್ಟ ವೃತ್ತಿಪರ ಕಾಲೇಜುಗಳು ತೆರೆದು, ಬರುವ ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಸಿಕೊಳ್ಳಬೇಕು. ಸಮಯದ ಅಭಾವ ಇರುವ ಕಾರಣ ಈ ತೀರ್ಮಾನ ಮಾಡಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2025ನೇ ಸಾಲಿನ ಯುಜಿಸಿಇಟಿ (ಇಂಜಿನಿಯರಿಂಗ್/ಆರ್ಕಿಟೆಕ್ಟರ್/ಆರ್ಯುವೇದ/ಯುನಾನಿ/ ಹೋಮಿಯೋಪತಿ/ ಕೃಷಿ ವಿಜ್ಞಾನ/ಭಿ-ಫಾರ್ಮ/ಫಾರ್ಮ-ಡಿ/ವೆಟರಿನರಿ/ಫಾರ್ಮಸಿ/ಬಿ.ಎಸ್‌ಸಿ ನರ್ಸಿಂಗ್, ಬಿಪಿಟಿ, ಬಿಪಿಒ ಮತ್ತು ಅಲೈಡ್ ಹೆಲ್ತ್ ಸೈನ್ಸ್) ಕೋರ್ಸುಗಳ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ದಿನಾಂಕ 30.08.2025ರಂದು ಪ್ರಕಟಿಸಿ, ದಿನಾಂಕ 31.08.2025ರಿಂದ 03.09.2025ರವರೆಗೆ ಕಾಲೇಜಿನಲ್ಲಿ ಪ್ರವೇಶ ಪಡೆಯಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಹಿನ್ನಲೆಯಲ್ಲಿ 2025ನೇ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಯುಜಿಸಿಇಟಿ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿರುವ ವಿವಿಧ ಕೋರ್ಸುಗಳ ಎಲ್ಲಾ ಕಾಲೇಜಿನವರು ದಿನಾಂಕ 31.08.2025ರಂದು ಭಾನುವಾರ ಸಹ ತಮ್ಮ ಕಾಲೇಜಿನ ಪ್ರವೇಶ ವಿಭಾಗ ತೆರೆದಿಡಲು ಮತ್ತು ಪ್ರವೇಶ ಪಡೆಯಲು ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಕೋರಿದ್ದಾರೆ.
#UGCET-25: ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟವಾಗಿದ್ದು, ಕಾಲೇಜುಗಳ ಪ್ರವೇಶ ಪ್ರಕ್ರಿಯೆ ಆ.31ರಿಂದ ಸೆ.3ರವರೆಗೆ ನಡೆಯಲಿದೆ. ಆ.31ರಂದು ಭಾನುವಾರ ಇದ್ದು, ಅಂದು ಕೂಡ ಎಲ್ಲ ಸಂಬಂಧಪಟ್ಟ ವೃತ್ತಿಪರ ಕಾಲೇಜುಗಳು ತೆರೆದು, ಬರುವ ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಸಿಕೊಳ್ಳಬೇಕು. ಸಮಯದ ಅಭಾವ ಇರುವ ಕಾರಣ ಈ ತೀರ್ಮಾನ ಮಾಡಲಾಗಿದೆ.… pic.twitter.com/Q00cBLDRTE
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 30, 2025