ಅಂಡಮಾನ್ ರಾಜಧಾನಿ ಪೋರ್ಟ್ ಬ್ಲೇರ್ ಇನ್ನು ‘ಶ್ರೀ ವಿಜಯಪುರಂ’: ಮರು ನಾಮಕರಣ ಮಾಡಲು ಕೇಂದ್ರ ನಿರ್ಧಾರ

ನವದೆಹಲಿ: ಪೋರ್ಟ್ ಬ್ಲೇರ್‌ಗೆ ಶ್ರೀ ವಿಜಯಪುರಂ ಎಂದು ಮರುನಾಮಕರಣ ಮಾಡಲು ಕೇಂದ್ರವು ನಿರ್ಧರಿಸಿದೆ. ಇದು ಹಿಂದಿನ ವಸಾಹತುಶಾಹಿ ಪರಂಪರೆಯನ್ನು ತೊಡೆದುಹಾಕಲು ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೊಡುಗೆಯನ್ನು ಗುರುತಿಸುವ ಗುರಿಯನ್ನು ಹೊಂದಿದೆ.

ಶುಕ್ರವಾರ ನಿರ್ಧಾರವನ್ನು ಪ್ರಕಟಿಸಿದ ಗೃಹ ಸಚಿವ ಅಮಿತ್ ಶಾ ಅವರು, ದೇಶವನ್ನು ವಸಾಹತುಶಾಹಿ ಮುದ್ರೆಗಳಿಂದ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಜಿ ಅವರ ದೃಷ್ಟಿಕೋನದಿಂದ ಪ್ರೇರಿತರಾಗಿ, ಇಂದು ನಾವು ಪೋರ್ಟ್ ಬ್ಲೇರ್ ಅನ್ನು ‘ಶ್ರೀ ವಿಜಯಪುರಂ ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಹಿಂದಿನ ಹೆಸರು ವಸಾಹತುಶಾಹಿ ಪರಂಪರೆಯನ್ನು ಹೊಂದಿದ್ದರೂ, ಶ್ರೀ ವಿಜಯ ಪುರಂ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಸಾಧಿಸಿದ ವಿಜಯವನ್ನು ಸಂಕೇತಿಸುತ್ತದೆ.

ಚೋಳ ಸಾಮ್ರಾಜ್ಯದ ನೌಕಾ ನೆಲೆಯಾಗಿ ಒಮ್ಮೆ ಸೇವೆ ಸಲ್ಲಿಸಿದೆ ಈ ಸ್ಥಳ ಇಂದು ನಮ್ಮ ಕಾರ್ಯತಂತ್ರ ಮತ್ತು ಅಭಿವೃದ್ಧಿ ಆಕಾಂಕ್ಷೆಗಳಿಗೆ ನಿರ್ಣಾಯಕ ನೆಲೆಯಾಗಿದೆ. ಇದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಂದ ನಮ್ಮ ತಿರಂಗದ ಮೊದಲ ಅನಾವರಣವನ್ನು ಆಯೋಜಿಸಿದ ಸ್ಥಳವಾಗಿದೆ. ವೀರ್ ಸಾವರ್ಕರ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ರಾಷ್ಟ್ರಕ್ಕಾಗಿ ಹೋರಾಡಿದ ಸೆಲ್ಯುಲಾರ್ ಜೈಲು ಹೊಂದಿದೆ ಎಂದು ಶಾ ಹೇಳಿದ್ದಾರೆ.

https://twitter.com/AmitShah/status/1834555334490554789

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read