ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರಿಗೆ ಆಧಾರ್ ಆಧಾರಿತ ಪಾವತಿ ಕಡ್ಡಾಯ ಗಡುವು ವಿಸ್ತರಣೆ

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರಿಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಕಡ್ಡಾಯ ಗಡುವು ವಿಸ್ತರಿಸಲಾಗಿದೆ.

ನರೇಗಾ ಕಾರ್ಮಿಕರಿಗೆ ಕಡ್ಡಾಯವಾಗಿ ಆಧಾರ್ ಆಧಾಧರಿತ ಪಾವತಿ ವ್ಯವಸ್ಥೆಯ ಮೂಲಕವೇ ಕೂಲಿ ಹಣ ಪಾವತಿಸಲು ನಿಗದಿ ಮಾಡಲಾಗಿದ್ದ ಕೊನೆಯ ದಿನಾಂಕವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಕೊನೆಯ ದಿನಾಂಕವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.

ಇನ್ನು ಮುಂದೆ ಗಡುವು ವಿಸ್ತರಣೆ ಮಾಡುವುದಿಲ್ಲವೆಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದರು. ಇದಾದ ಕೆಲ ದಿನಗಳ ನಂತರ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ನರೇಗಾ ಕಾರ್ಮಿಕರಿಗೆ ಕಡ್ಡಾಯವಾಗಿ ಆಧಾರ್ ಆಧಾರಿತ ಕೂಲಿ ಪಾವತಿ ವಸ್ಯವಸ್ಥೆ ಗಡುವು ವಿಸ್ತರಣೆ ಮಾಡಲಾಗಿದೆ.

MGNREGA ಕಾರ್ಮಿಕರಿಗೆ ಆಧಾರ್ ಆಧಾರಿತ ಪಾವತಿಯನ್ನು ಸಕ್ರಿಯಗೊಳಿಸಲು ಕೇಂದ್ರವು ಡಿಸೆಂಬರ್ 31 ರವರೆಗೆ ಗಡುವನ್ನು ವಿಸ್ತರಿಸಿದೆ. ಎಬಿಪಿಎಸ್ ಮೂಲಕ ವೇತನ ಪಾವತಿ ಮತ್ತು ನ್ಯಾಷನಲ್ ಆಟೊಮೇಟೆಡ್ ಕ್ಲಿಯರಿಂಗ್ ಹೌಸ್(ಎನ್‌ಎಸಿಹೆಚ್) ಮೂಲಕ ಸಾಮಾನ್ಯ ಎಲೆಕ್ಟ್ರಾನಿಕ್ ಪಾವತಿಗಳು ಈಗ ಡಿಸೆಂಬರ್ 31 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಂದುವರಿಯುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ. ಈ ವರ್ಷದ ಆರಂಭದಲ್ಲಿ, ಫೆಬ್ರವರಿ 1 ರಿಂದ ಸಂಪೂರ್ಣವಾಗಿ ಎಬಿಪಿಎಸ್‌ಗೆ ಬದಲಾಯಿಸಲು ಸಚಿವಾಲಯವು ನಿರ್ದೇಶನವನ್ನು ನೀಡಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read