ಹಳೆಯ ವಾಹನ ಸ್ಕ್ರ್ಯಾಪ್ ಯೋಜನೆ ಉತ್ತೇಜನಕ್ಕೆ ಕೇಂದ್ರದಿಂದ ಆರ್ಥಿಕ ನೆರವು

ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಗೆ ಹಾಕಲು ಪ್ರೋತ್ಸಾಹ, ತೆರಿಗೆ ರಿಯಾಯಿತಿ ನೀಡಲು ಕೇಂದ್ರ ಸರ್ಕಾರವು ಬಂಡವಾಳ ಹೂಡಿಕೆಗಾಗಿ ವಿಶೇಷ ನೆರವು ಯೋಜನೆಯಡಿಯಲ್ಲಿ ರಾಜ್ಯಗಳಿಗೆ ಹೆಚ್ಚುವರಿ 2,000 ಕೋಟಿ ರೂಪಾಯಿ ನೀಡಲಿದೆ.

2022-23ರ ಬಜೆಟ್‌ ನಲ್ಲಿ ಸರ್ಕಾರ ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ 1.05 ಲಕ್ಷ ಕೋಟಿ ರೂಪಾಯಿಗಳ ವಿಶೇಷ ನೆರವು ಯೋಜನೆ ಪರಿಚಯಿಸಿದೆ. ಯೋಜನೆಯಡಿ ಬಂಡವಾಳ ಯೋಜನೆಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲದ ರೂಪದಲ್ಲಿ ರಾಜ್ಯ ಸರ್ಕಾರಗಳಿಗೆ ಹಣಕಾಸಿನ ನೆರವು ನೀಡಲಾಗುತ್ತಿದೆ.

2,000 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ರಾಜ್ಯಗಳಿಗೆ ನೀಡಲಾಗುವುದು. ಸರ್ಕಾರಿ ವಾಹನಗಳನ್ನು ಅಥವಾ 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಇದು ಉತ್ತೇಜಿಸುತ್ತದೆ. ಜೊತೆಗೆ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡುವವರಿಗೆ ತೆರಿಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ.

15 ವರ್ಷಕ್ಕಿಂತ ಹಳೆಯದಾದ ರಾಜ್ಯ ಸರ್ಕಾರಿ ವಾಹನಗಳನ್ನು ರದ್ದುಗೊಳಿಸಲು, ಹಳೆಯ ವಾಹನಗಳನ್ನು ಸ್ಕ್ರ್ಯಾಪಿಂಗ್ ಮಾಡಲು ವ್ಯಕ್ತಿಗಳಿಗೆ ತೆರಿಗೆ ವಿನಾಯಿತಿ ನೀಡಲು 2,000 ಕೋಟಿ ರೂ. ಹೆಚ್ಚುವರಿಯಾಗಿ ನೀಡಲಾಗುವುದು. ರಸ್ತೆ ಸಾರಿಗೆ ವಲಯವನ್ನು ಸೇರಿಸುವ ಯೋಜನೆಯ ಒಟ್ಟು ವೆಚ್ಚವು 1.07 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಈ ಯೋಜನೆಯಡಿ ಇದುವರೆಗೆ 77,110 ಕೋಟಿ ರೂ.ಗಳಿಗೆ ಸರ್ಕಾರ ಅನುಮೋದನೆ ನೀಡಿದ್ದು, ಈ ಪೈಕಿ 41,118 ಕೋಟಿ ರೂ.ಗಳನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read