ನವದೆಹಲಿ: ಪಾಕಿಸ್ತಾನಿ ರಾಷ್ಟ್ರೀಯ ಧ್ವಜಗಳು ಮತ್ತು ಸಂಬಂಧಿತ ಸರಕುಗಳ ಮಾರಾಟದ ಕುರಿತು ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್, Ubuy ಇಂಡಿಯಾ, Etsy, ದಿ ಫ್ಲಾಗ್ ಕಂಪನಿ ಮತ್ತು ದಿ ಫ್ಲಾಗ್ ಕಾರ್ಪೊರೇಷನ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ(CCPA) ನೋಟಿಸ್ ನೀಡಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು, ಇಂತಹ ಇ-ಕಾಮರ್ಸ್ ವೇದಿಕೆಗಳಿಗೆ ಪಾಕಿಸ್ತಾನ ಧ್ವಜ ಸಂಬಂಧಿತ ವಸ್ತು ಮಾರಾಟದ ಪಟ್ಟಿಗಳನ್ನು ತಕ್ಷಣವೇ ತೆಗೆದುಹಾಕಲು ನಿರ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಮಾರಾಟವನ್ನು “ಸೂಕ್ಷ್ಮವಲ್ಲದ” ಮತ್ತು ರಾಷ್ಟ್ರೀಯ ಭಾವನೆಯ ಉಲ್ಲಂಘನೆ ಎಂದು ಕರೆದ ಅವರು, ಇಂತಹ ಅಸೂಕ್ಷ್ಮತೆಯನ್ನು ಸಹಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಪಾಕಿಸ್ತಾನಿ ಧ್ವಜಗಳು ಮತ್ತು ಸಂಬಂಧಿತ ಸರಕುಗಳ ಮಾರಾಟದ ಕುರಿತು CCPA ವತಿಯಿಂದ ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್, Ubuy ಇಂಡಿಯಾ, Etsy, ದಿ ಫ್ಲಾಗ್ ಕಂಪನಿ ಮತ್ತು ದಿ ಫ್ಲಾಗ್ ಕಾರ್ಪೊರೇಷನ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಿಗೆ ನೋಟಿಸ್ ನೀಡಿದೆ. ಅಂತಹ ಅಸೂಕ್ಷ್ಮತೆಯನ್ನು ಸಹಿಸಲಾಗುವುದಿಲ್ಲ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಅಂತಹ ಎಲ್ಲಾ ವಿಷಯವನ್ನು ತಕ್ಷಣ ತೆಗೆದುಹಾಕುವಂತೆ ಮತ್ತು ಇಲ್ಲಿ ರಾಷ್ಟ್ರೀಯ ಕಾನೂನುಗಳನ್ನು ಪಾಲಿಸುವಂತೆ ನಿರ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ಚಿಹ್ನೆಗಳನ್ನು ಹೊಂದಿರುವ ಧ್ವಜಗಳು ಮತ್ತು ಪರಿಕರಗಳು ಈ ವೇದಿಕೆಗಳಲ್ಲಿ ಖರೀದಿಗೆ ಲಭ್ಯವಿದ್ದವು.
ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ಪ್ರತೀಕಾರದ ಮಿಲಿಟರಿ ದಾಳಿ ಆಪರೇಷನ್ ಸಿಂಧೂರ್ ನಂತರ ರಾಷ್ಟ್ರೀಯ ಭಾವನೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಮಂಗಳವಾರದಂದು, ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(CAIT) ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಪಾಕಿಸ್ತಾನಿ ರಾಷ್ಟ್ರೀಯ ಚಿಹ್ನೆಗಳನ್ನು ಹೊಂದಿರುವ ವಸ್ತುಗಳ ಆನ್‌ಲೈನ್ ಮಾರಾಟವನ್ನು ನಿಷೇಧಿಸುವಂತೆ ಒತ್ತಾಯಿಸಿತ್ತು.
ಭಾರತೀಯ ಸೈನಿಕರು ತಮ್ಮ ಜೀವಗಳನ್ನು ಪಣಕ್ಕಿಡುತ್ತಿರುವಾಗ ಅಂತಹ ವಸ್ತುಗಳ ಮಾರಾಟವು ರಾಷ್ಟ್ರೀಯ ಭಾವನೆ ಮತ್ತು ಸಶಸ್ತ್ರ ಪಡೆಗಳಿಗೆ ಮಾಡಿದ ಅವಮಾನ ಎಂದು CAIT ಹೇಳಿದೆ.
CAIT ಅಧ್ಯಕ್ಷ ಬಿ.ಸಿ. ಭಾರ್ತಿಯಾ ಅವರು ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದು, ಅಂತಹ ಮಾರಾಟಗಳನ್ನು ನಿಷೇಧಿಸಲು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.