ನವದೆಹಲಿ: ಹಣಕಾಸು ಸಂಸ್ಥೆಗಳ ಹೆಸರಲ್ಲಿ ಹೆಚ್ಚುತ್ತಿರುವ ಆನ್ ಲೈನ್ ವಂಚನೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಬ್ಯಾಂಕುಗಳಿಗೆ ಪ್ರತ್ಯೇಕ ಮತ್ತು ಸುರಕ್ಷಿತವಾದ ಬ್ಯಾಂಕಿಂಗ್ ಡೊಮೈನ್ ರೂಪಿಸಿದ್ದು, ಮುಂದಿನ ಆರು ತಿಂಗಳಲ್ಲಿ ಎಲ್ಲಾ ಬ್ಯಾಂಕುಗಳು ಈ ಡೊಮೈನ್ ಗೆ ವರ್ಗಾವಣೆಯಾಗಲಿವೆ. ಭಾರತೀಯ ರಾಷ್ಟ್ರೀಯ ಇಂಟರ್ನೆಟ್ ವಿನಿಮಯ ಕೇಂದ್ರದ(NIXI) ಸಿಇಒ ದೇವೇಶ್ ತ್ಯಾಗಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಎಂಎಸ್ಎಂಎ ಮತ್ತು ಪ್ರವಾಸೋದ್ಯಮ ಸಚಿವಾಲಯಗಳೊಂದಿಗೂ ಮಾತುಕತೆ ನಡೆಸುತ್ತಿದ್ದು, ಸಂಬಂಧಿಸಿದ ಪ್ರತ್ಯೇಕ ಡೊಮೈನ್ ಗಳನ್ನು ರೂಪಿಸುವ ಯೋಜನೆ ಆರಂಭಿಸಲಾಗಿದೆ. ಹೆಚ್ಚುತ್ತಿರುವ ಸೈಬರ್ ವಂಚನೆ ತಡೆಯಲು ಪರಿಹಾರ ರೂಪಿಸುವಂತೆ ಆರ್ಬಿಐ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ಸಂಪರ್ಕಿಸಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕುಗಳಿಗೆ ಬ್ಯಾಂಕ್.ಇನ್ ಮತ್ತು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಡೊಮೈನ್ ಮಟ್ಟದ ಭದ್ರತೆ ಬಲಪಡಿಸಲು ತನ್ನ ರಿಜಿಸ್ಟ್ರಾರ್ ಮಾನ್ಯತೆ ಒಪ್ಪಂದವನ್ನು ತಿದ್ದುಪಡಿ ಮಾಡಿದೆ. ಆದರೂ, ಅದರ ಅನುಷ್ಠಾನ ಇನ್ನೂ ನಡೆಯುತ್ತಿದೆ. ನಾವು ಹೆಚ್ಚು ಸುರಕ್ಷಿತವಾಗಲು ಬಯಸಿದರೆ ನಮ್ಮದೇ ಆದ ನೀತಿ ರಚಿಸಿ ಜಾರಿಗೊಳಿಸಬೇಕಿದೆ ಎಂದು ಹೇಳಿದ್ದಾರೆ.