BIG NEWS: ದೇಶದಲ್ಲಿ ಜನಗಣತಿ ಜೊತೆಗೇ ಜಾತಿಗಣತಿ ನಡೆಸುವ ಬಗ್ಗೆ ಸರ್ಕಾರದ ತೀರ್ಮಾನ ಸಾಧ್ಯತೆ

ಬೆಂಗಳೂರು: ದೇಶದಲ್ಲಿ ಜನಗಣತಿಗೆ ಕೇಂದ್ರ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಆದರೆ, ಇದರೊಂದಿಗೆ ಜಾತಿಗಣತಿಯನ್ನು ನಡೆಸಬೇಕೆ ಎನ್ನುವುದರ ಕುರಿತು ಇನ್ನು ತೀರ್ಮಾನ ಕೈಗೊಂಡಿಲ್ಲ.

ಭಾರತದಲ್ಲಿ 1981 ರಿಂದಲೂ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಸಲಾಗುತ್ತಿದೆ. ಶೀಘ್ರವೇ ಜನಗಣತಿ ಕಾರ್ಯ ಆರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 2020ರ ಏಪ್ರಿಲ್ 1ರಂದೇ ಜನಗಣತಿ ನಡೆಯಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಜನಗಣತಿಯನ್ನು ಮುಂದೂಡಲಾಗಿತ್ತು.

ಜನಗಣತಿ ಜೊತೆಗೆ ಜಾತಿ ಗಣತಿ ನಡೆಸುವ ಕುರಿತಾಗಿ ಇನ್ನೂ ತೀರ್ಮಾನವಾಗಿಲ್ಲ. ವಿವಿಧ ಪಕ್ಷಗಳು ಜಾತಿ ಗಣತಿಗೂ ಒತ್ತಾಯ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಶೀಘ್ರವೇ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಜನಗಣತಿಯ ಹೊಸ ಅಂಕಿ ಅಂಶಗಳು ಲಭ್ಯವಿಲ್ಲದ ಕಾರಣ 2011ರ ಜನಗಣತಿ ಅಂಕಿ ಅಂಶಗಳನ್ನು ಆಧರಿಸಿ ಸರ್ಕಾರದ ವಿವಿಧ ನೀತಿಗಳು ರೂಪುಗೊಳ್ಳುತ್ತಿದ್ದು, ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಜನಗಣತಿಗಾಗಿ ಸುಮಾರು 12 ಸಾವಿರ ಕೋಟಿ ರೂಪಾಯಿಗೂ ಅಧಿಕ ವೆಚ್ಚವಾಗಬಹುದು.

ಮನೆಗಳಿಗೆ ತೆರಳಿ ಜನಗಣತಿಯ ಅರ್ಜಿ ಭರ್ತಿ ಮಾಡುವುದು ಸಹಜ ಪ್ರಕ್ರಿಯೆಯಾಗಿದ್ದರೂ ಸ್ವಸಮೀಕ್ಷೆಗೂ ಜನರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಪೋರ್ಟಲ್ ಆರಂಭಿಸಲಾಗುವುದು. ಆಧಾರ್ ಸಂಖ್ಯೆ, ಮೊಬೈಲ್ ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ನಮೂದಿಸಿ ಸ್ವ ಸಮೀಕ್ಷೆಯಲ್ಲಿ ಭಾಗವಹಿಸಬಹುದು.

ಮೊಬೈಲ್ ಫೋನ್, ಇಂಟರ್ನೆಟ್ ಸಂಪರ್ಕ, ಸ್ಮಾರ್ಟ್ಫೋನ್, ಬೈಸಿಕಲ್, ಸ್ಕೂಟರ್, ನಾಲ್ಕು ಚಕ್ರದ ವಾಹನ ಹೊಂದಿರುವುದು ಸೇರಿ 31 ಪ್ರಶ್ನೆಗಳನ್ನು ಜನಗಣತಿ ನೋಂದಣಿ ಪ್ರಧಾನ ಆಯುಕ್ತಾಲಯ ಸಿದ್ಧಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read