ಕಿಟಕಿ ಗಾಜು ಒಡೆದು ಶಾಲೆ ಒಳಗೆ ಬಂದು ಹೆಣಗಾಡಿದ ಜಿಂಕೆ: CC TV ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಇತ್ತೀಚಿನ ದಿನಗಳಲ್ಲ, CC TV ಕಣ್ಣಲ್ಲಿ ಚಿರತೆಗಳು ಕಾಣಿಸಿಕೊಳ್ತಾನೇ ಇವೆ. ಕೆಲವೇ ಕೆಲವು ದಿನಗಳ ಹಿಂದಷ್ಟೆ ಊರ ಮಧ್ಯದಲ್ಲಿ ಸಿಂಹಗಳ ಹಿಂಡು ಕಾಣಿಸಿಕೊಂಡಿತ್ತು. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ಈಗ ಮತ್ತೊಂದು ಪ್ರಾಣಿಯ ವಿಡಿಯೋ ಸೋಶಿಯಲ್‌ಮೀಡಿಯಾದಲ್ಲಿ ಹರಿದಾಡ್ತಿದೆ.

ಇಲ್ಲಿ ಜಿಂಕೆಯೊಂದು ಕಿಟಕಿಯ ಗಾಜನ್ನ ಒಡೆದು ತರಗತಿಯೊಂದರೊಳಗೆ ಓಡಿ ಬರುವುದನ್ನ ವಿಡಿಯೋದಲ್ಲಿ ನೋಡಬಹುದು. ಗಾಬರಿಗೊಂಡಿರುವ ಜಿಂಕೆ ತರಗತಿಯೊಳಗೆ ಬಂದ ನಂತರ ಎಲ್ಲಿ ಓಡಿಹೋಗಬೇಕು ಅನ್ನೊದೇ ಗೊತ್ತಾಗದೇ ಪರದಾಡುತ್ತೆ. ಈ ವಿಡಿಯೋವನ್ನ ಫೇಸ್‌ಬುಕ್‌ನಲ್ಲಿ ಅಲಹಾಬಾದ್‌ನ ಎವರ್‌ಗ್ರೀನ್ ಎಲಿಮೆಂಟರಿ ಶಾಲೆ ಶೇರ್ ಮಾಡಿಕೊಂಡಿದೆ.

“ವಾರಾಂತ್ಯದಲ್ಲಿ ಶಾಲೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಜಿಂಕೆಯೊಂದು ನುಗ್ಗಿ ಬಂದಿದೆ. ಕಿಟಕಿಯ ಗಾಜು ಒಡೆದು ಬಂದರೂ ಜಿಂಕೆಗೆ ಏನೂ ಅಪಾಯವಾಗಿರುವುದಿಲ್ಲ. ಇದು ಒಳಗೆ ಬಂದಾಕ್ಷಣ ಇಲ್ಲಿನ ನುಣುಪು ನೆಲದ ಮೇಲೆ ನಡೆದಾಡಲು ಹೆಣಗಾಡಿದೆ. ಕೊನೆಗೆ ತನ್ನನ್ನ ತಾನು ಸಂಭಾಳಿಸಿಕೊಂಡು, ಈ ಪ್ರಾಣಿ ಕೆಲ ಗಂಟೆ ಈ ಶಾಲೆಯಲ್ಲೆಲ್ಲ ಓಡಾಡಿ ಅದೇ ದಾರಿಯಿಂದ ಹೊರಗೆ ಹೋಗಿದೆ.’ ಎಂದು ಶಾಲೆಯ ಆಡಳಿತ ಮಾಡಿರುವ ಪೋಸ್ಟ್ ‌ನಲ್ಲಿ ಬರೆದುಕೊಂಡಿದೆ.

ಇಂಟರ್‌ನೆಟ್ ಬಳಕೆದಾದರರು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ. ಒಬ್ಬರಂತೂ ಈ ವಿಡಿಯೋ ನೋಡಿ ‘ಈ ಶಾಲೆಯಲ್ಲಿ ಆಗಾಗ ಪಾಣಿಗಳು ಬರುತ್ತಲೇ ಇರುತ್ತೆ. ಆಗಾಗ ಹಾವುಗಳು ಕೂಡಾ ಇಲ್ಲಿ ಬರುವ ಸುದ್ದಿ ಇವೆ’ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೊಬ್ಬರು ‘ಜಿಂಕೆ ಹೀಗೆ ಓಡಿ ಬರುವ ಈ ವಿಡಿಯೋ ನಿಜಕ್ಕೂ ಅದ್ಭುತ’ ಎಂದು ಬರೆದಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಅನಿಸಿಕೆಯನ್ನ ವ್ಯಕ್ತ ಪಡಿಸಿದ್ದಾರೆ.

https://www.youtube.com/watch?v=8TBD7rb633g&feature=youtu.be

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read