ನೆರೆಯ ರಾಷ್ಟ್ರ ಚೀನಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಕನಿಷ್ಠ 116 ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯರಾತ್ರಿ ಗನ್ಸು ಪ್ರಾಂತ್ಯದಲ್ಲಿ ಸಂಭವಿಸಿದ 5.9 ರ ತೀವ್ರತೆಯ ಭೂಕಂಪವು ಚೀನಾ ಜನತೆಯನ್ನು ಕಣ್ಣೀರಿಗೆ ತಳ್ಳಿದೆ.
ಗನ್ಸು ಪ್ರಾಂತೀಯ ತುರ್ತು ನಿರ್ವಹಣಾ ವಿಭಾಗದ ಪ್ರಕಾರ, ಭೂಕಂಪವು ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯನ್ನು ದಾಖಲಿಸಿದೆ. ಇದರಿಂದ ಗನ್ಸು ಪ್ರಾಂತ್ಯದಲ್ಲಿ ಕನಿಷ್ಠ 105 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 400 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಭೀಕರ ಭೂಕಂಪವು ಹಲವು ಕಟ್ಟಡಗಳನ್ನು ನೆಲಸಮಗೊಳಿಸಿದ ನಂತರ ಭೂಕಂಪದ ತೀವ್ರತೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ವಿವಿಧೆಡೆ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳಲ್ಲಿ ಭೂಕಂಪದ ದೃಶ್ಯಗಳು ಸೆರೆಯಾಗಿವೆ. ಇದರಲ್ಲಿ ಕಂಪನದ ಅನುಭವ ಆಗ್ತಿದ್ದಂತೆ ಜನ ಎದ್ನೋ ಬಿದ್ನೋ ಎಂದು ಗಾಬರಿಯಿಂದ ಓಡಿಹೋಗುವ ದೃಶ್ಯಗಳು ಸೆರೆಯಾಗಿವೆ.
ಕಟ್ಟಡಗಳು, ಮನೆಗಳು ಕಂಪಿಸುತ್ತಾ ಧರೆಗುರುಳಿ ಹಲವರು ಗಾಯಗೊಂಡ ದೃಶ್ಯಗಳು ಸೆರೆಯಾಗಿದ್ದು ಭೂಕಂಪದ ತೀವ್ರತೆಗೆ ಸಾಕ್ಷಿಯಾಗಿವೆ. ಭೀಕರ ಭೂಕಂಪಕ್ಕೆ ಸಿಲುಕಿದ ಚೀನಾದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ಸಾಗುತ್ತಿವೆ.
1,400 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ಸಿಬ್ಬಂದಿಯನ್ನು ವಿಪತ್ತು ವಲಯಕ್ಕೆ ಕಳುಹಿಸಲಾಗಿದೆ. 5.9 ತೀವ್ರತೆಯ ಭೂಕಂಪದ ನಂತರ ಹಲವಾರು ಸಣ್ಣ ಆಘಾತಗಳು ಸಂಭವಿಸಿದ್ದು, ಮುಂದಿನ ದಿನಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಕಂಪನಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಭೂಕಂಪದ ಕೇಂದ್ರದ ಸುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ಮತ್ತು ನೀರು ಸರಬರಾಜು ಸ್ಥಗಿತಗೊಂಡಿದೆ.
https://twitter.com/Romanaamir01/status/1736935899525788003?ref_src=twsrc%5Etfw%7Ctwcamp%5Etweetembed%7Ctwterm%5E1736935899525788003%7Ctwgr%5E0e5550e02f8bede652b696c82c9e0087ea72b62d%7Ctwcon%5Es1_&ref_url=https%3A%2F%2Fwww.wionews.com%2Fworld%2Fcctv-cameras-capture-midnight-horror-as-59-magnitude-shakes-china-watch-671153
https://twitter.com/niteshr813/status/1736809508423577708?ref_src=twsrc%5Etfw%7Ctwcamp%5Etweetembed%7Ctwterm%5E1736809508423577708%7Ctwgr%5E0e5550e02f8bede652b696c82c9e0087ea72b62d%7Ctwcon%5Es1_&ref_url=https%3A%2F%2Fwww.wionews.com%2Fworld%2Fcctv-cameras-capture-midnight-horror-as-59-magnitude-shakes-china-watch-671153
https://twitter.com/volcaholic1/status/1736843135521567012?ref_src=twsrc%5Etfw%7Ctwcamp%5Etweetembed%7Ctwterm%5E1736843135521567012%7Ctwgr%5E0e5550e02f8bede652b696c82c9e0087ea72b62d%7Ctwcon%5Es1_&ref_url=https%3A%2F%2Fwww.wionews.com%2Fworld%2Fcctv-cameras-capture-midnight-horror-as-59-magnitude-shakes-china-watch-671153