ಮಂಗಳೂರು: ಸಿಸಿಬಿ ಪೊಲೀಸರು ಮಾದಕ ವಸ್ತುಗಳ ಅಕ್ರಮ ಸಾಗಣೆ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ 123 ಕೆಜಿ ಗಾಂಚಾ ಹಾಗೂ ಎರಡು ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ. ಕಾಸರಗೋಡು ಮೂಲದ ಮಸೂದ್ ಎಂ.ಕೆ.(45), ಮಹಮ್ಮದ್ ಆಶಿಕ್(24) ಹಾಗೂ ಸುಬೇರ್(30) ಬಂಧಿತ ಆರೋಪಿಗಳು. ಮೂಡಬಿದರೆಯ ಬೆಳುವಾಯಿಯ ಕಾಂತಾವಾರ ಕ್ರಾಸ್‌ನ ಮರದಕೆರೆ ಬಳಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವೇಳೆ ಮಾಲು ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 123 ಕೆಜಿ ಗಾಂಜಾ, 2 ವಾಹನ, 5 ಮೊಬೈಲ್ ಸೇರಿ 46.20 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ. ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.