ನವದೆಹಲಿ: ಸಿಬಿಎಸ್ಇ ಪಠ್ಯದಲ್ಲಿ ಮೊಘಲರು ಮತ್ತು ದೆಹಲಿ ಸುಲ್ತಾನರ ಕುರಿತಾದ ಎಲ್ಲಾ ಪಠ್ಯ ಕೈಬಿಡಲಾಗಿದೆ. ಮಹಾ ಕುಂಭಮೇಳ, ಮೇಕ್ ಇನ್ ಇಂಡಿಯಾ, ಭೇಟಿ ಬಚಾವೋ ಭೇಟಿ ಪಡಾವೋ ಆಂದೋಲನ ಮೊದಲಾದ ವಿಷಯಗಳನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಶಾಲಾ ಶಿಕ್ಷಣದಲ್ಲಿ ಭಾರತೀಯ ಸಂಪ್ರದಾಯ, ಸಿದ್ದಾಂತ, ಜ್ಞಾನ ವ್ಯವಸ್ಥೆ ಮತ್ತು ಸ್ಥಳೀಯ ವಿಚಾರಗಳನ್ನು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ(ಎನ್.ಸಿ.ಇ.ಆರ್.ಟಿ.)ಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
7ನೇ ತರಗತಿಯ ಭಾರತದ ಸಾಮ್ರಾಜ್ಯಗಳು ಮತ್ತು ಪವಿತ್ರ ಭೂಗೋಳಶಾಸ್ತ್ರ ಅಧ್ಯಾಯಗಳಲ್ಲಿ ಈ ಬದಲಾವಣೆ ಮಾಡಲಾಗಿದೆ. ಇದಕ್ಕೂ ಮುನ್ನ ಎನ್.ಸಿ.ಇ.ಆರ್.ಟಿ. ಮೊಘಲರ ಕುರಿತ ಪಠ್ಯ ಕಡಿತಗೊಳಿಸಿತ್ತು. ಈಗ ಆ ವಿಷಯವನ್ನು ಸಂಪೂರ್ಣವಾಗಿ ಕೈ ಬಿಡಲಾಗಿದೆ ಎಂದು ಹೇಳಲಾಗಿದೆ.