ಕಾವೇರಿ ವಿವಾದ ; ಸರ್ವಪಕ್ಷಗಳ ಸಭೆಯಲ್ಲಿ ಮಹತ್ತರದ ತೀರ್ಮಾನ ಕೈಗೊಂಡ ರಾಜ್ಯ ಸರ್ಕಾರ..!

ಬೆಂಗಳೂರು : ಕಾವೇರಿ ನದಿ ನೀರು ಬಿಡುಗಡೆ ಸಂಬಂಧ ನಿನ್ನೆ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಸರ್ವಪಕ್ಷಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.ಈ ವೇಳೆ ಸರ್ಕಾರ ಕೆಲವು ಮಹತ್ವದ ತೀರ್ಮಾನ ಕೈಗೊಂಡಿದೆ.

• ಕಾವೇರಿ ನೀರು ನಿಯಂತ್ರಣ ಸಮಿತಿ ಜುಲೈ 12 ರಿಂದ ತಮಿಳುನಾಡಿಗೆ ನಿತ್ಯ 1 TMC ನೀರು ಬಿಡಲು ಹೇಳಿದೆ.

* ಕಾನೂನನ್ನು ಗೌರವಿಸುತ್ತೇವೆ ಹಾಗೆಯೇ ನಮ್ಮ ರೈತರ ಹಿತವನ್ನೂ ಕಾಪಾಡುವುದು ಮುಖ್ಯವಾಗಿದೆ.

* ರಾಜ್ಯದ ಕೃಷಿ ಚಟುವಟಿಕೆಗಳಿಗೂ ನೀರು ಒದಗಿಸಬೇಕಿದ್ದು, ಈ ನಿಟ್ಟಿನಲ್ಲಿ 1 ಟಿಎಂಸಿ ಬದಲಾಗಿ ನಿತ್ಯ 8000 ಕ್ಯೂಸೆಕ್ ನೀರು ಬಿಡಲು ತೀರ್ಮಾನಿಸಲಾಗಿದೆ.
• ಇದಲ್ಲದೆ CWRC ಶಿಫಾರಸಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ.
• ಮಳೆ ಕಡಿಮೆಯಾದರೆ 8000 ಕ್ಯೂಸೆಕ್ಗಿಂತ ಕಡಿಮೆ ನೀರು ಬಿಡುತ್ತೇವೆ.
* ಒಂದು ವೇಳೆ ಮಳೆ ಹೆಚ್ಚಾದರೆ CWRC ಶಿಫಾರಸ್ಸಿನಂತೆ ನೀರು ಬಿಡುಗಡೆ ಮಾಡುತ್ತೇವೆ.
* ಇದಕ್ಕೆ ಸರ್ವಪಕ್ಷಗಳ ಮುಖಂಡರು ಸಹಮತ ವ್ಯಕ್ತಪಡಿಸಿದ್ದಾರೆ.

https://twitter.com/DKShivakumar/status/1812489423290036439

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read