Video | ಯುಪಿ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು: ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆ

ಲಖನೌ: ಬಿಜೆಪಿ ಕಿಸಾನ್ ಮೋರ್ಚಾ ನಾಯಕನನ್ನು ಗುರುವಾರ ಸಂಜೆ ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ.

ಮಜೋಲಾ ಪ್ರದೇಶದಲ್ಲಿ ನಡೆದ ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಿಜೆಪಿ ಮುಖಂಡ ಅನುಜ್ ಚೌಧರಿ ತನ್ನ ಸಹೋದರನೊಂದಿಗೆ ಉದ್ಯಾನವನಕ್ಕೆ ವಾಕ್ ಮಾಡಲು ಹೊರಟಿದ್ದಾಗ ಬೈಕ್‌ನಲ್ಲಿ ಬಂದ ಮೂವರು ಏಕಾಏಕಿ ದಾಳಿ ನಡೆಸಿದ್ದಾರೆ. ಆರೋಪಿಗಳು ಚೌಧರಿ ಮೇಲೆ ಗುಂಡು ಹಾರಿಸಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಬ್ರೈಟ್‌ಸ್ಟಾರ್ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಆಸ್ಪತ್ರೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಕುಟುಂಬದವರ ಹೇಳಿಕೆ ಮೇರೆಗೆ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಜಕೀಯ ವೈಷಮ್ಯದಿಂದ ಈ ಕೊಲೆ ನಡೆದಿದೆ ಎಂದು ಅನುಜ್ ಚೌಧರಿ ಕುಟುಂಬ ಆರೋಪಿಸಿದ್ದು, ಹತ್ಯೆಗೆ ಪ್ರತಿಸ್ಪರ್ಧಿಗಳೇ ಕಾರಣ ಎಂದು ಆರೋಪಿಸಿದ್ದಾರೆ.

ಹತ್ಯೆಯಾದ ಬಿಜೆಪಿ ಮುಖಂಡ ಅನುಜ್ ಚೌಧರಿ 2021 ರಲ್ಲಿ ಸಂಭಾಲ್‌ನ ಅಸಮೋಲಿಯಿಂದ ಬ್ಲಾಕ್ ಮುಖ್ಯಸ್ಥ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಅವರು ಚುನಾವಣೆಯಲ್ಲಿ ಕೇವಲ 10 ಮತಗಳಿಂದ ಸೋತಿದ್ದರು. ಪ್ರಸ್ತುತ ಬ್ಲಾಕ್ ಮುಖ್ಯಸ್ಥ (ಅಸ್ಮೋಲಿ) ಸಂತೋಷ್ ದೇವಿ ವಿರುದ್ಧ ಅನುಜ್ ಅವರು ಅವಿಶ್ವಾಸ ನಿರ್ಣಯಕ್ಕೆ ತಯಾರಿ ನಡೆಸುತ್ತಿದ್ದರು. ಹೀಗಾಗಿ ಸಂತೋಷ್ ದೇವಿ ಅವರ ಪತಿ ಪ್ರಭಾಕರ್, ಅವರ ಮಗ ಅನಿಕೇತ್ ಚೌಧರಿ ಸೇರಿದಂತೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read