alex Certify International | Kannada Dunia | Kannada News | Karnataka News | India News - Part 129
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ: ಜೀವ ಪಣಕ್ಕಿಟ್ಟು ಸಮುದ್ರದ ಅಲೆಗಳೊಂದಿಗೆ ಜೂಜಾಟವಾಡುತ್ತಿರುವ ವ್ಯಕ್ತಿ

ಸಾಮಾಜಿಕ ಜಾಲತಾಣವು ಅಚ್ಚರಿಯ ವಿಡಿಯೋಗಳ ಮೂಲಕ ಸದಾ ನಮ್ಮನ್ನು ಪುಳಕಗೊಳಿಸುತ್ತಲೇ ಇರುತ್ತದೆ. ಕಡಲ ತೀರದಲ್ಲಿ ಕುಳಿತು ಸಮುದ್ರದ ಅಲೆಗಳ ಏರಿಳಿತಗಳ ಜೊತೆಗಿನ ಜೂಟಾಟವನ್ನು ಎಂಜಾಯ್ ಮಾಡುವ ಅನೇಕ ವಿಡಿಯೋ Read more…

ಭಾರತೀಯ ಮೂಲದ ಪತ್ರಕರ್ತನ ಮೇಲೆ ಖಲಿಸ್ತಾನಿ ಹೋರಾಟಗಾರರಿಂದ ಹಲ್ಲೆ | Video

ಲಂಡನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮುಂದೆ ಭಾರತದ ಬಾವುಟ ಕೆಳಗಿಳಿಸಿ ಖಲಿಸ್ತಾನಿ ಬಾವುಟ ಹಾರಿಸಲು ಯತ್ನಿಸಿದ ಬೆನ್ನಲ್ಲೇ ಭಾರತೀಯ ಪತ್ರಕರ್ತನ ಮೇಲೆ ಹಲ್ಲೆಯಾಗಿರೋ ಆರೋಪ ಕೇಳಿಬಂದಿದೆ. ವಾಷಿಂಗ್ಟನ್ Read more…

ವಾಟ್ಸಾಪ್ ಗ್ರೂಪ್‌ನಲ್ಲಿ ಧರ್ಮವಿರೋಧಿ ಕಂಟೆಂಟ್; ಪಾಕ್ ವ್ಯಕ್ತಿಗೆ ಮರಣ ದಂಡನೆ

ವಾಟ್ಸಾಪ್‌ ಗ್ರೂಪ್‌ ಒಂದರಲ್ಲಿ ಧರ್ಮವಿರೋಧಿ ಕಂಟೆಂಟ್ ಕಳುಹಿಸಿದ ಆಪಾದನೆ ಮೇಲೆ ಪಾಕಿಸ್ತಾನದ ವ್ಯಕ್ತಿಯೊಬ್ಬನಿಗೆ ಅಲ್ಲಿನ ಭಯೋತ್ಪಾದನಾ-ನಿಗ್ರಹ ನ್ಯಾಯಾಲಯವೊಂದು ಮರಣ ದಂಡನೆ ಶಿಕ್ಷೆ ವಿಧಿಸಿದೆ. ಸಯ್ಯದ್ ಮುಹಮ್ಮದ್ ಜೀಶಾನ್ ಹೆಸರಿನ Read more…

ತಾಲಿಬಾನ್ ಆಡಳಿತದಲ್ಲಿಯೂ ಗೌಪ್ಯವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಮಹಿಳಾ ಉದ್ಯಮಿ

ತಾಲಿಬಾನ್ ಅಧಿಕಾರದಲ್ಲಿರುವ ಅಫ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳು ಶಾಲೆಯತ್ತ ಬರುವುದು ಕನಸಿನ ಮಾತು ಎಂಬಂತಾಗಿದೆ. ಇಂಥ ಪರಿಸ್ಥಿತಿಯ ನಡುವೆಯೇ ಅಫ್ಘನ್ ಉದ್ಯಮಿಯೊಬ್ಬರು ಹೆಣ್ಣು ಮಕ್ಕಳಿಗೆ ತೆರೆಮರೆಯಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಿದ್ದಾರೆ. Read more…

ಜರ್ಮನಿಯಲ್ಲಿ ಮತ್ತೆ ಗುಂಡಿನ ದಾಳಿ; ಇಬ್ಬರು ಬಲಿ

ಜರ್ಮನಿಯಲ್ಲಿ ಕಳೆದೊಂದು ತಿಂಗಳಲ್ಲಿ ಎರಡನೇ ಬಾರಿಗೆ ಗುಂಡಿನ ದಾಳಿಯಾಗಿದ್ದು ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಹ್ಯಾಂಬರ್ಗ್‌ನಲ್ಲಿ ಗುಂಡಿನ ದಾಳಿಯ ನಂತರ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಜರ್ಮನಿಯ ಬಿಲ್ಡ್ ಪತ್ರಿಕೆ ವರದಿ Read more…

ಭಾರತೀಯ ಮೂಲದ ಬಾಲಕಿ ಕೊಂದ ಪಾತಕಿಗೆ 100 ವರ್ಷ ಜೈಲು ಶಿಕ್ಷೆ

ಯುಎಸ್ ರಾಜ್ಯ ಲೂಸಿಯಾನದಲ್ಲಿ 2021 ರಲ್ಲಿ 5 ವರ್ಷದ ಭಾರತೀಯ ಮೂಲದ ಬಾಲಕಿಯನ್ನು ಕೊಂದ ವ್ಯಕ್ತಿಗೆ 100 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಶ್ರೆವ್‌ಪೋರ್ಟ್‌ನ ಜೋಸೆಫ್ ಲೀ ಸ್ಮಿತ್‌ Read more…

ಆಗಸದಲ್ಲಿ ಅರೋರಾ ಬೋರಿಯಾಲಿಸ್‌ ಬಿಡಿಸಿದ ವರ್ಣವೈಭವ; ಚಿತ್ರಗಳನ್ನು ಶೇರ್‌ ಮಾಡಿಕೊಂಡು ಸಂಭ್ರಮಿಸಿದ ನೆಟ್ಟಿಗರು

ಅರೋರಾಗಳನ್ನು ವೀಕ್ಷಿಸುವುದು ಪ್ರತಿಯೊಬ್ಬ ವಿಜ್ಞಾನಾಸಕ್ತನ ಕನಸು. ಈ ಅರೋರಾಗಳ ಪೈಕಿ ತೆಂಕಣ ಬೆಳಕು ತನ್ನ ವರ್ಣಚಿತ್ತಾರಗಳಿಂದ ಆಗಸವನ್ನು ಭರಿಸುವ ಅದ್ಭುತವನ್ನು ನೋಡಲು ಉತ್ತರ ಅಮೆರಿಕಾದ ಕೆನಡಾ ಹಾಗೂ ಅಮೆರಿಕಾಗೆ Read more…

ಮಹಿಳೆಗೆ ಅಪರೂಪದ ಕಾಯಿಲೆ; 1 ವರ್ಷದವರೆಗೆ ಮೂತ್ರ ವಿಸರ್ಜನೆ ಮಾಡಲಾಗದೇ ತೊಂದರೆ

ಅಪರೂಪದ ಸಿಂಡ್ರೋಮ್ ನಿಂದಾಗಿ ಮಹಿಳೆಯೊಬ್ಬರು ಒಂದು ವರ್ಷದವರೆಗೆ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗದೇ ನೋವು ಅನುಭವಿಸಿದ್ದಾರೆ. ಲಂಡನ್ ಮೂಲದ ಕಂಟೆಂಟ್ ಕ್ರಿಯೇಟರ್, 30 ವರ್ಷದ ಎಲ್ಲೆ ಆಡಮ್ಸ್‌ ಈ Read more…

Video | ಕೂತಲ್ಲಿಗೇ ಊಟ ಕೇಳುವ ಪರಮ ಸೋಂಬೇರಿ ಈ ಕುರಿ

ನಮ್ಮಲ್ಲಿನ ಸೋಂಬೇರಿತನವನ್ನು ಪ್ರಚೋದಿಸುವ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ನೋಡಿ ತಮಗೆ ತಾವೇ ರಿಲೇಟ್ ಮಾಡಿಕೊಳ್ಳುತ್ತಿದ್ದಾರೆ. ಸೋಂಬೇರಿ ಕುರಿಯೊಂದು ಯಾವಾಗಲೂ ನಿದ್ರೆ ಮಾಡುತ್ತಲೇ ಇದ್ದು, ಎದ್ದು ನಿಂತು Read more…

ಅಪರಿಚಿತರ ಜೇಬಿಗೆ ಬಿತ್ತು ಲಕ್ಷ ಲಕ್ಷ ಮೊತ್ತದ ಚೆಕ್; ಅವರ ರಿಯಾಕ್ಷನ್ ಹೇಗಿತ್ತು ಗೊತ್ತಾ ?

ನಿಮ್ಮ ಜೇಬಿನಲ್ಲಿ ಇದ್ದಕ್ಕಿದ್ದಂತೆ ಲಕ್ಷ ಲಕ್ಷ ಹಣದ ಚೆಕ್ ಕಂಡ್ರೆ ಏನ್ಮಾಡ್ತೀರಾ ? ವಾಸ್ತವವಾಗಿ ಯಾರಿಗೂ ಕಾಣದಂತೆ ಗುಟ್ಟಾಗಿ ಇಟ್ಟಿಕೊಳ್ತೀವಿ ಅನ್ನೋರೇ ಹೆಚ್ಚು. ಆದ್ರೆ ಲಕ್ಷ ಲಕ್ಷ ರೂಪಾಯಿ Read more…

ಜಾದೂಗಾರ ಮಾಡಿದ್ದ ಮ್ಯಾಜಿಕ್ ನೋಡಿ ಬೆಚ್ಚಿಬಿದ್ದ ಮಹಿಳೆ; ಇದು ಸೈನ್ಸ್ ಟ್ರಿಕ್ ಅಂದ ನೆಟ್ಟಿಗರು

ಮ್ಯಾಜಿಕ್ ಅನ್ನೋದೆ ಕೈ ಚಳಕ, ಮನಸ್ಸಲ್ಲಿ ಭ್ರಮೆ ಹುಟ್ಟಿಸುವಂತಹ ಕಲೆ. ವಾಸ್ತವವಾಗಿ ಕೆಲ ಟ್ರಿಕ್‌ಗಳನ್ನ ಉಪಯೋಗಿಸಿ ಮಾಡುವಂತ ಅದ್ಭುತ ಕಲೆ ಇದಾಗಿದೆ. ಇದೇ ರೀತಿಯ ಮ್ಯಾಜಿಕ್ ಒಂದರ ವಿಡಿಯೋ Read more…

ಅಮ್ಮ ನೀನು ನನ್ನ ಯಾಕೆ ತಿಂದೆ: ತಾಯಿ ಜೊತೆಗಿನ ಪುಟ್ಟ ಕಂದನ ಸಂಭಾಷಣೆಗೆ ಫಿದಾ ಆದ ನೆಟ್ಟಿಗರು

ಮಕ್ಕಳ ಮುದ್ದುಮುದ್ದಾದ ಮಾತು ಕೇಳೊದಕ್ಕೆನೇ ಖುಷಿ. ಅವರ ತೊದಲು ಮಾತು, ಮುಗ್ಧತೆ ತುಂಬಿದ ಮುಖ ನೋಡಿದ್ರೆ ನಗು ಉಕ್ಕಿ ಬಂದು ಬಿಡುತ್ತೆ. ಕೆಲವೊಮ್ಮೆ ಅವರ ಮಾತು ದೊಡ್ಡವರನ್ನೇ ಶಾಕ್ Read more…

ಅಜ್ಜಿ ಎನಿಸಿಕೊಳ್ಳಬೇಕಿದ್ದ ವಯಸ್ಸಿನಲ್ಲಿ ಎರಡನೇ ವಿವಾಹ; ಟ್ರೋಲ್‌ಗೆ ತುತ್ತಾಗುತ್ತಲೇ ಇದ್ದಾಳೆ ಪಾಕ್‌ ನಟಿ….!

ಪ್ರೀತಿಸಲು ವಯಸ್ಸಿನ ಮಿತಿಯಿಲ್ಲ ಅನ್ನೋ ಮಾತಿದೆ. ಇದಕ್ಕೆ ತಕ್ಕಂತೆ ನಡೆದುಕೊಂಡಿದ್ದಾಳೆ ಪಾಕಿಸ್ತಾನದ ಹಿರಿಯ ನಟಿ. ಅಜ್ಜಿ ಎನಿಸಿಕೊಳ್ಳಬೇಕಿದ್ದ ವಯಸ್ಸಿನಲ್ಲಿ ಹಸೆಮಣೆ ಏರಿದ್ದಾಳೆ. 72 ವರ್ಷದ ನಟಿಯೊಬ್ಬಳು ತನಗಿಂತ ಎರಡು Read more…

BIG NEWS: ಪಂಚಮಸಾಲಿ ಹೋರಾಟಕ್ಕೆ ತಾತ್ಕಾಲಿಕ ತೆರೆ; ಕಣ್ಣೀರಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ ಶೇ.7ರಷ್ಟು ಮೀಸಲಾತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಂದರೆ 2D ಅಡಿಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಶೇ.2ರಷ್ಟು ಮೀಸಲಾತಿ ಹೆಚ್ಚಿಸಲಾಗಿದೆ. ಇದರ ಬೆನ್ನಲ್ಲೇ ಪಂಚಮಸಾಲಿ Read more…

ಈ ಕಲ್ಲು ನಿಜಕ್ಕೂ ಗಾಳಿಯಲ್ಲಿ ತೇಲುತ್ತಿದೆಯೇ ? ಇದರ ಹಿಂದಿದೆ ಇಂಟ್ರಸ್ಟಿಂಗ್ ಸಂಗತಿ

ಕಣ್ಣಿಗೆ ಕಾಣುವುದಕ್ಕೂ ಅಸಲಿ ಕಥೆಗೂ ಅಜಗಜಾಂತರ ಎನ್ನುವಷ್ಟು ವ್ಯತ್ಯಾಸ ಇರುವ ಅನೇಕ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಅದಾಗಲೇ ಭಾರೀ ಸುದ್ದಿ ಮಾಡಿವೆ. ಕೆಲವೊಮ್ಮೆ ನಮ್ಮ ಕಣ್ಣಿಗೆ ಗೋಚರಿಸುವ ದೃಶ್ಯಗಳು Read more…

ಗಂಟೆಗಳ ಕಾಲ ಸತಾಯಿಸಿ ಕೊನೆಗೂ ಪೊಲೀಸರಿಗೆ ಸಿಕ್ಕ ಕುದುರೆ ಮರಿ

ಅಮೆರಿಕದ ಟಸ್ಕಾಲೂಸಾ ಎಂಬ ಊರಿನ ಆಲ್ಬರ್ಟಾ ಎಂಬ ವಸತಿ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ ಕುದುರೆ ಮರಿಯನ್ನು ಹಿಡಿಯಲು ಅದೆಷ್ಟು ಹರಸಾಹಸ ಪಡಬೇಕಾಯಿತು ಎಂದು ಪೊಲೀಸ್ ಅಧಿಕಾರಿಗಳು ಫೇಸ್ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಈ Read more…

ಪ್ರೇಯಸಿಗೆ ಸಹಾಯ ಮಾಡಲು ಅತಿವೇಗದ ಚಾಲನೆ; ಪೊಲೀಸರ ಅತಿಥಿಯಾದ ಯುವಕ

ತನ್ನ ಪ್ರೇಯಸಿಗೆ ಸಹಾಯ ಮಾಡಲೆಂದು ತುಂಬಾ ವೇಗವಾಗಿ ವಾಹನ ಚಾಲನೆ ಮಾಡ್ತಿದ್ದ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ. ಫ್ಲೋರಿಡಾದಲ್ಲಿ ವೇಗದ ಮಿತಿಯನ್ನು ಮೀರಿ ಚಾಲನೆ ಮಾಡಿದ್ದಕ್ಕಾಗಿ 22 ವರ್ಷದ ಜೆವೊನ್ Read more…

ಎಲ್ಲರ ಮನಸೂರೆಗೊಳ್ಳುತ್ತಿದೆ ಬಾಹ್ಯಾಕಾಶ ಕೇಂದ್ರದಿಂದ ಸೆರೆ ಹಿಡಿದ ಸೂರ್ಯಾಸ್ತದ ಚಿತ್ರ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್) ಆಗಾಗ್ಗೆ ಭೂಮಿ ಹಾಗೂ ಆಗಸಗಳ ಅದ್ಭುತ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡುತ್ತಲೇ ಇರುತ್ತದೆ. ಈ ಬಾರಿ ಸೂರ್ಯಾಸ್ತವನ್ನು ತನ್ನ ಎತ್ತರದಿಂದ ಸೆರೆ ಹಿಡಿದಾಗ Read more…

ಇಲ್ಲಿದೆ ಜಗತ್ತಿನ ಅತ್ಯಂತ ಅಪಾಯಕಾರಿ ಸಸಿ; ತಾನನುಭವಿಸಿದ ಸಂಕಷ್ಟ ಬಿಚ್ಚಿಟ್ಟ ಮಹಿಳೆ

’ಜಗತ್ತಿನ ಅತ್ಯಂತ ಅಪಾಯಕಾರಿ ಸಸಿ’ಯ ಮೇಲೆ ಬಿದ್ದ ಪರಿಣಾಮ ಆರು ತಿಂಗಳು ಪಡಬಾರದ ಪಾಡು ಅನುಭವಿಸಿದ ಕಥೆಯನ್ನು ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ. ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ವೇಳೆ ಆಯತಪ್ಪಿ Read more…

ದೋಣಿಯಡಿ ಹಾದು ಹೋದ ಬೃಹತ್‌ ತಿಮಿಂಗಿಲ; ಮಂತ್ರಮುಗ್ದರನ್ನಾಗಿಸುತ್ತೆ ವಿಡಿಯೋ

ಬೃಹತ್‌ ಗಾತ್ರದ ನೀಲಿ ತಿಮಿಂಗಿಲವೊಂದು ದೋಣಿಯಡಿ ಈಜುತ್ತಿರುವ ವಿಡಿಯೋವೊಂದು ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದೆ. ಯುನಿಲ್ಯಾಡ್ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್‌ ಮಾಡಲಾದ ಈ ಪುಟ್ಟ ಕ್ಲಿಪ್‌ನಲ್ಲಿ ದೈತ್ಯ ಜೀವಿಯು ತನ್ನ Read more…

ಒಂದೇ ಜಾಗದಲ್ಲಿ ಪದೇ ಪದೇ ಬಡಿದ ಮಿಂಚು; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಒಂದೇ ಜಾಗದಲ್ಲಿ ಮಿಂಚು ಎರಡು ಬಾರಿ ಸಂಭವಿಸುವುದಿಲ್ಲ ಎಂಬ ಮಾತನ್ನು ಸುಳ್ಳು ಮಾಡುವ ಘಟನೆಯ ವಿಡಿಯೋವೊಂದು ಆನ್ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಟ್ವಿಟರ್‌ನಲ್ಲಿ @OTerrifying ಎಂಬ ಹ್ಯಾಂಡಲ್ ಈ ವಿಡಿಯೋ ಶೇರ್‌ Read more…

ಟಿಕ್‌ ಟಾಕ್ ಸ್ಟಾರ್ ಜೆಹಾನ್‌ ರನ್ನು ಬಲಿ ಪಡೆದ ಮೈಗ್ರೇನ್; ತಲೆನೋವು ಅಂತ ನಿರ್ಲಕ್ಷ್ಯ ಮಾಡುವ ಮುನ್ನ ಹುಷಾರ್

ಮೈಗ್ರೇನ್ ಬಗ್ಗೆ ನೀವು ಕೇಳಿರಬಹುದು. ಈ ತಲೆನೋವು ಸಾಮಾನ್ಯವಾಗಿ ಮಹಿಳೆಯರಿಗೆ ಕಾಡುವುದು ಹೆಚ್ಚು. ಪ್ರಪಂಚದ ಪ್ರತಿ ಏಳನೇ ವ್ಯಕ್ತಿಯ ಮೇಲೆ ಪರಿಣಾಮ ಬೀರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಮೈಗ್ರೇನ್ Read more…

ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಸ್ವಾಗತಿಸಿದ ಮಾರ್ಕ್ ಜುಕರ್ ಬರ್ಗ್ ದಂಪತಿ

ಫೇಸ್‌ಬುಕ್‌ ಸಹ-ಸಂಸ್ಥಾಪಕ ಮತ್ತು ಮೆಟಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಡಾ. ಪ್ರಿಸ್ಸಿಲ್ಲಾ ಚಾನ್ ತಮ್ಮ ಮೂರನೇ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಜುಕರ್‌ಬರ್ಗ್ Read more…

Watch Video | ಸಾಹಸ ಚಟುವಟಿಕೆ ವೇಳೆ ಸಂಭವಿಸಿತು ಊಹಿಸಲಾಗದ ದುರಂತ

ಸಾಹಸ ಚಟುವಟಿಕೆಗಳು ಹೆಚ್ಚಿನ ಮೋಜು ನೀಡುವುದರ ಜೊತೆಗೆ ಕೆಲವೊಮ್ಮೆ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತವೆ. ಬಂಗೀ ಜಂಪಿಂಗ್ ಮಾಡುವ ವೇಳೆ ಹಗ್ಗ ತುಂಡಾಗಿ ಪ್ರವಾಸಿಗನ ಪ್ರಾಣಕ್ಕೇ ಕುತ್ತು ಬಂದ ಘಟನೆ Read more…

ಅಂಕಿಗಳನ್ನು ಸಹಪಾಠಿಗೆ ಹೇಳಿಕೊಡುತ್ತಿರುವ ಬಾಲಕ; ಕ್ಯೂಟ್‌ ವಿಡಿಯೋ‌ ವೈರಲ್

ಪುಟಾಣಿ ಬಾಲೆಯರಿಗೆ ತಮ್ಮ ಮೆಚ್ಚಿನ ಮಿಸ್‌ ಥರ ಆಗಬೇಕು ಎನಿಸಿ, ’ಮಿಸ್‌ ಆಟ’ ಆಡೋ ಮಕ್ಕಳನ್ನು ಬಹುಶಃ ನಾವೆಲ್ಲಾ ನೋಡಿಕೊಂಡೇ ಬೆಳೆದಿದ್ದೇವೆ. ಪ್ರೀಸ್ಕೂಲ್ ಒಂದರಲ್ಲಿ ಪುಟ್ಟ ಮಗುವೊಂದು ತನ್ನ Read more…

ಮನೆ ಅಟ್ಟದಿಂದ ಬಂದ ವಿಚಿತ್ರ ಸದ್ದು ಕೇಳಿ ಹುಡುಕಿಕೊಂಡು ಹೋದ ವ್ಯಕ್ತಿಗೆ ಕಾದಿತ್ತು‌ ಶಾಕ್…!

ಸಾಮಾನ್ಯವಾಗಿ ಮನೆ ಎಂದರೆ ನಮಗೆ ಸುರಕ್ಷಿತವೆನಿಸುವ ಜಾಗ. ಆದರೆ ನಿಮ್ಮ ಮನೆಗೆ ಅಪರಿಚಿತರು ನುಗ್ಗಿದಾಗ ನೀವೇನು ಮಾಡುವಿರಿ ? ಇತ್ತೀಚೆಗೆ ತನ್ನ ಮನೆಯ ಅಟ್ಟದಿಂದ ಅಪರಿಚಿತ ದನಿಯನ್ನು ಕೇಳುತ್ತಿದ್ದ Read more…

Video: ನಿಷೇಧಾಜ್ಞೆ ನಡುವೆಯೇ ಪ್ಯಾಕೇಜ್ ಡೆಲಿವರಿ; ಏಜೆಂಟ್‌ ಕರ್ತವ್ಯಪರತೆಯನ್ನು ಮೆಚ್ಚಿಕೊಂಡ ನೆಟ್ಟಿಗರು

ನಿಷೇಧಾಜ್ಞೆಯ ನಡುವೆಯೂ ತನ್ನ ಕರ್ತವ್ಯ ಮುಂದುವರೆಸಿದ ಅಮೇಜ಼ಾನ್ ಉದ್ಯೋಗಿಯೊಬ್ಬರು ಉತ್ತರ ಕರೋಲಿನಾದ ಮನೆಯೊಂದಕ್ಕೆ ಪ್ಯಾಕೇಜ್ ಒಂದನ್ನು ಡೆಲಿವರಿ ಮಾಡಿ ಬಂದಿದ್ದಾರೆ. ಘಟನೆಯ ವಿಡಿಯೋ ಭಾರೀ ವೈರಲ್ ಆಗಿದ್ದು, ಅಮೆರಿಕದ Read more…

7,000 ವರ್ಷ ಹಳೆಯ ಸ್ಮಾರಕದಲ್ಲಿ ಮಾನವ ಪಳೆಯುಳಿಕೆ ಪತ್ತೆ

ಸೌದಿ ಅರೇಬಿಯಾದಲ್ಲಿರುವ 7,000 ವರ್ಷ ಹಳೆಯ ಮರುಭೂಮಿ ಸ್ಮಾರಕವೊಂದರಲ್ಲಿ ಪ್ರಾಣಿಗಳ ಎಲುಬುಗಳ ನಡುವೆ ಹೂತುಹೋಗಿರುವ ಮಾನವನ ಮೂಳೆಗಳನ್ನು ಪ್ರಾಚ್ಯವಸ್ತು ತಜ್ಞರು ಪತ್ತೆ ಮಾಡಿದ್ದಾರೆ. 30ರ ವಯಸ್ಸಿನ ಪುರುಷನೊಬ್ಬನ ಮೂಳೆಗಳು Read more…

ಮದುವೆಗೆ ಬರುವ ಅತಿಥಿಗಳಿಗೆ ಕೇವಲ ನೀರು ಕೊಡಲು ಬಯಸಿದ ನವಜೋಡಿ…!

ಮದುವೆಗಳು ದುಬಾರಿ ವ್ಯವಹಾರ ಎನಿಸಿದೆ. ಅದಕ್ಕಾಗಿಯೇ ದಂಪತಿಯೊಬ್ಬರು ತಮ್ಮ ಮದುವೆಯ ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡು ಈಗ ಟ್ರೋಲ್​ಗೆ ಒಳಗಾಗಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ವಧು-ವರರು Read more…

’ನನಗೆ ನನ್ನ ಬದುಕಿನ ಮೇಲೇ ದ್ವೇಷ ಹುಟ್ಟುತ್ತಿದೆ’: ಡೆಲಿವರಿ ಏಜೆಂಟ್‌ ವ್ಯಥೆ

ಫುಡ್ ಡೆಲಿವರಿ ಕೆಲಸ ಅದೆಷ್ಟು ಆಯಾಸ ತರುವಂಥದ್ದು ಎಂದು ಸಾಬೀತು ಪಡಿಸುವ ಅನೇಕ ನಿದರ್ಶನಗಳನ್ನು ನಾವೀಗಾಗಲೇ ಕಂಡಿದ್ದೇವೆ. ಊಬರ್‌ ಈಟ್ಸ್‌‌ನ ಡೆಲಿವರಿ ಏಜೆಂಟ್ ಒಬ್ಬರ ಈ ಸಂದೇಶ ನೆಟ್ಟಿಗರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...