Auto

ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕವನ್ನು ಉದ್ಘಾಟಿಸಿದ ʼಟಾಟಾ ಮೋಟಾರ್ಸ್ʼ

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಕೋಲ್ಕತ್ತಾದಲ್ಲಿ ತಮ್ಮ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕವನ್ನು (ಆರ್ ವಿ ಎಸ್ ಎಫ್) ಉದ್ಘಾಟಿಸಿದೆ. ಈ ಅತ್ಯಾಧುನಿಕ ಘಟಕವು ಟಾಟಾ ಕಂಪನಿಯು ಈ ದೇಶದಲ್ಲಿ ಹೊಂದಿರುವ ಎಂಟನೇ ವಾಹನ ಸ್ಕ್ರ್ಯಾಪಿಂಗ್ ಘಟಕವಾಗಿದೆ. 'ರೀ.ವೈ.ರ್ – ರೀಸೈಕಲ್ ವಿತ್ ರೆಸ್ಪೆಕ್ಟ್' ಎಂಬ ಹೆಸರಿನ ಈ ಅತ್ಯಾಧುನಿಕ ಘಟಕವು ವರ್ಷಕ್ಕೆ 21,000 ಜೀವಿತಾವಧಿ ಮುಗಿದ ವಾಹನಗಳನ್ನು ಸುಸ್ಥಿರವಾಗಿ ಮತ್ತು ಸುರಕ್ಷಿತವಾಗಿ ಸ್ಕ್ರ್ಯಾಪ್ ಮಾಡುವ ಸಾಮರ್ಥ್ಯ ಹೊಂದಿದೆ. ಈ ಘಟಕವನ್ನು ಟಾಟಾ ಮೋಟಾರ್ಸ್‌ ನ ಪಾಲುದಾರ ಸಂಸ್ಥೆಯಾದ ಸೆಲ್ಲಡೇಲ್ ಸಿನರ್ಜೀಸ್ ಇಂಡಿಯಾ ಪ್ರೈ. ಲಿಮಿಟೆಡ್ ನಿರ್ವಹಿಸಲಿದ್ದು, ಇದು ಎಲ್ಲಾ ಬ್ರಾಂಡ್‌ ಗಳ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳು ಸೇರಿದಂತೆ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಕೂಡ ಸ್ಕ್ರ್ಯಾಪ್ ಮಾಡಲಿದೆ. ರೀ.ವೈ.ರ್ ಘಟಕವನ್ನು ಪಶ್ಚಿಮ ಬಂಗಾಳ ಸರ್ಕಾರದ ಸಾರಿಗೆ ಸಚಿವ ಸ್ನೇಹಾಸಿಸ್ ಚಕ್ರವರ್ತಿ ಉದ್ಘಾಟಿಸಿದರು. ಕೋಲ್ಕತ್ತಾದ ಮೇಯರ್ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಗರಾಭಿವೃದ್ಧಿ ಮತ್ತು ಪೌರ ವ್ಯವಹಾರಗಳ ಸಚಿವ ಫಿರ್ಹಾದ್ ಹಕೀಂ ಈ ಸಮಾರಂಭದಲ್ಲಿ ವರ್ಚುವಲ್ ಆಗಿ ಭಾಗವಹಿಸಿದರು. ಪಶ್ಚಿಮ ಬಂಗಾಳ ಸರ್ಕಾರದ ಸಾರಿಗೆ ಇಲಾಖೆಯ ಕಾರ್ಯದರ್ಶಿ ಡಾ. ಸೌಮಿತ್ರ ಮೋಹನ್, ಐಎಎಸ್ ಮತ್ತು ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಟ್ರಕ್ಸ್ ವಿಭಾಗದ ಉಪಾಧ್ಯಕ್ಷ ಮತ್ತು ಬಿಸಿನೆಸ್ ಹೆಡ್ ರಾಜೇಶ್ ಕೌಲ್ ಉಪಸ್ಥಿತರಿದ್ದರು. ಅವರೆಲ್ಲರ ಜೊತೆಗೆ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಟಾಟಾ ಮೋಟಾರ್ಸ್‌ ನ ಗಣ್ಯರು ಭಾಗವಹಿಸಿದ್ದರು. ಈ ಘಟಕ ಉದ್ಘಾಟನೆಯ ಮೂಲಕ ಟಾಟಾ ಕಂಪನಿಯು ಇದೀಗ ಕೋಲ್ಕತ್ತಾ, ಜೈಪುರ, ಭುವನೇಶ್ವರ, ಸೂರತ್, ಚಂಡೀಗಢ, ದೆಹಲಿ ಎ ಸಿ ಆರ್, ಪುಣೆ ಮತ್ತು ಗುವಾಹಟಿಯಲ್ಲಿ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕಗಳನ್ನು ಹೊಂದಿದಂತಾಗಿದೆ. ಕೋಲ್ಕತ್ತಾದ ಘಟಕವು ಪೂರ್ವ ಭಾರತದಲ್ಲಿನ ಮೂರನೇ ರೀ.ವೈ.ರ್ ಘಟಕವಾಗಿದ್ದು, ಈ ಪ್ರದೇಶದ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲಿದೆ.

ರಾಜ್ಯದ ವಾಹನ ಮಾಲೀಕರಿಗೆ ಇಂದಿನಿಂದ ತಟ್ಟಲಿದೆ ತೆರಿಗೆ ಬಿಸಿ

ಬೆಂಗಳೂರು: ಇಂದಿನಿಂದ ರಾಜ್ಯದ ವಾಹನ ಮಾಲೀಕರಿಗೆ ತೆರಿಗೆ ಬಿಸಿ ತಟ್ಟಲಿದೆ. ಟ್ಯಾಕ್ಸಿ ಮತ್ತು ಲಘು ಗೂಡ್ಸ್…

ರಾಜ್ಯದ ವಾಹನ ಮಾಲೀಕರಿಗೆ ತೆರಿಗೆ ಶಾಕ್: ನಾಳೆಯಿಂದ ಎಲ್ಲಾ ವಾಣಿಜ್ಯ ವಾಹನಗಳ ಜೀವಿತಾವಧಿ ತೆರಿಗೆ ಹೆಚ್ಚಳ

ಬೆಂಗಳೂರು: ವಾಣಿಜ್ಯ ವಾಹನಗಳ ಮೇಲಿನ ಮೋಟಾರು ವಾಹನ ತೆರಿಗೆ ಹೆಚ್ಚಳದ ಕರ್ನಾಟಕ ಮೋಟಾರ್ ವಾಹನಗಳ ತೆರಿಗೆ…

ಟ್ರಕ್ ಗಳಿಗೂ ಸುರಕ್ಷತಾ ಮೌಲ್ಯಮಾಪನ ರೇಟಿಂಗ್ ಪ್ರಾರಂಭಿಸಲು ಸರ್ಕಾರ ಚಿಂತನೆ

ನವದೆಹಲಿ: ಭಾರತ್ NCAP(ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಮ್) ಮಾದರಿಯಲ್ಲಿ ಟ್ರಕ್ ಗಳು ಮತ್ತು ಭಾರಿ ವಾಣಿಜ್ಯ…

BIG NEWS: ಇನ್ನು ವಾಹನಗಳಿಗೆ ಕೊಳಲು, ತಬಲಾ ಸೇರಿ ಸಂಗೀತ ವಾದ್ಯಗಳ ಹಾರ್ನ್ ಕಡ್ಡಾಯ ಕಾನೂನು ಜಾರಿಗೆ ಚಿಂತನೆ

ನವದೆಹಲಿ: ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಮಾತ್ರ ವಾಹನಗಳ ಹಾರ್ನ್ ಆಗಿ ಬಳಕೆ ಮಾಡಲು ಅನುವಾಗುವಂತೆ…

ಅಂಬಾನಿ ಗ್ಯಾರೇಜ್‌ಗೆ ಹೊಸ ಸೇರ್ಪಡೆ: ಕೆಂಪು ಬಣ್ಣದ ಫೆರಾರಿ ಪ್ಯೂರೊಸ್ಯಾಂಗ್ ಎಂಟ್ರಿ | Watch

ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಹಿರಿಯ ಪುತ್ರ ಆಕಾಶ್ ಅಂಬಾನಿ…

ಸಾಲುಗಟ್ಟಿ ನಿಂತ ವಾಹನಗಳು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಮತ್ತೆ ಮುನ್ನೆಲೆಗೆ | Photo

ಬೆಂಗಳೂರು ತನ್ನ ನಿರಂತರ ಟ್ರಾಫಿಕ್ ದಟ್ಟಣೆಗೆ ಕುಖ್ಯಾತವಾಗಿದೆ. ನಗರದ ರಸ್ತೆಗಳು ಗಂಟೆಗಟ್ಟಲೆ ಜಾಮ್‌ನಿಂದ ತುಂಬಿ ತುಳುಕುತ್ತಿದ್ದು,…

ಕ್ಯಾಮೆರಾದಲ್ಲಿ ಸಿಕ್ಕಿಬಿದ್ರೆ ಹುಷಾರ್ ; ಈ 12 ತಪ್ಪು ಮಾಡಿದ್ರೆ ʼಫೈನ್ʼ ಗ್ಯಾರಂಟಿ !

ತಿರುವನಂತಪುರಂ: ಕೇಂದ್ರ ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ನಿರ್ದಿಷ್ಟಪಡಿಸಿದ 12 ಅಪರಾಧಗಳಿಗೆ ಮಾತ್ರ ಕ್ಯಾಮೆರಾ ಕಣ್ಗಾವಲು…

ಕಾರು ಚಾಲಕನ ಹುಚ್ಚಾಟ ; ಡಿವೈಡರ್ ಮೇಲೆ ಚಲಾಯಿಸಿದ ವಿಡಿಯೋ ವೈರಲ್ | Watch

ಅಂಧೇರಿ ಪಶ್ಚಿಮದ ಫೋರ್ ಬಂಗಲೋಸ್ ಮಾರುಕಟ್ಟೆ ಪ್ರದೇಶದಲ್ಲಿ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಕಾರು ಚಾಲಕನೊಬ್ಬ…

BIG NEWS: ಆಂಧ್ರದಲ್ಲಿ ಭೀಕರ ರಸ್ತೆ ದುರಂತ ; ಮೂವರು ಸ್ಥಳದಲ್ಲೇ ಸಾವು !

ಆಂಧ್ರಪ್ರದೇಶದ ಕಡಪ ಜಿಲ್ಲೆಯ ವಂಟಿಮಿಟ್ಟ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು…