ಗುತ್ತಿಗೆದಾರನ 20 ಲಕ್ಷ ರೂ. ಕದ್ದು ಜೂಜಾಡಿದ ಚಾಲಕ ಅರೆಸ್ಟ್

ಶಿವಮೊಗ್ಗ: ಗುತ್ತಿಗೆದಾರನಿಗೆ ಸೇರಿದ 20 ಲಕ್ಷ ರೂ. ಕದ್ದು ಗೋವಾದ ಕ್ಯಾಸಿನೋಗೆ ಜೂಜಾಡಡಲು ಹೋಗಿದ್ದ ಕಾರ್ ಚಾಲಕನನ್ನು ಶಿವಮೊಗ್ಗದ ತುಂಗಾನಗರ ಠಾಣೆ ಪೋಲಿಸರು ಬಂಧಿಸಿದ್ದಾರೆ.

ಶಿರಾಳಕೊಪ್ಪದ ನಿತಿನ್ ಬಂಧಿತ ಆರೋಪಿ. ಬೆಂಗಳೂರಿನ ಗುತ್ತಿಗೆದಾರ ರೂಪೇಶ್ ಕುಮಾರ್ ಶಿವಮೊಗ್ಗದಲ್ಲಿ ಕುಡಿಯುವ ನೀರಿನ ಕಾಮಗಾರಿ ಮತ್ತು ನೀರಿನ ಟ್ಯಾಂಕ್ ನಿರ್ಮಾಣದ ಗುತ್ತಿಗೆ ಪಡೆದುಕೊಂಡಿದ್ದಾರೆ. ರೂಪೇಶ್ ಕುಮಾರ್ 15 ದಿನಗಳಿಗೊಮ್ಮೆ ಶಿವಮೊಗ್ಗಕ್ಕೆ ಬಂದು ಕೆಲಸಗಾರರಿಗೆ ವೇತನ ಬಟವಾಡೆ ಮಾಡುತ್ತಿದ್ದರು.

ಜುಲೈ 28ರಂದು ರೂಪೇಶ್ ಕುಮಾರ್ ತಮ್ಮ ಕಾರ್ ನಲ್ಲಿ ಶಿವಮೊಗ್ಗಕ್ಕೆ ಬಂದಿದ್ದು, ಕೆಲಸಗಾರರಿಗೆ ನೀಡಲು 20 ಲಕ್ಷ ರೂ. ತಂದಿದ್ದಾರೆ. ಎಂ.ಆರ್.ಎಸ್. ಬಳಿ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿ ವೀಕ್ಷಿಸುವಾಗ ಕಾರ್ ನಲ್ಲಿದ್ದ ನಿತಿನ್ 20 ಲಕ್ಷ ರೂ. ನಗದು ತೆಗೆದುಕೊಂಡು ಪರಾರಿಯಾಗಿದ್ದಾನೆ.

ಕದ್ದ ಹಣವನ್ನು ಗೋವಾಕ್ಕೆ ತೆರಳಿ ಕ್ಯಾಸಿನೋದಲ್ಲಿ ಜೂಜಾಡಿ ಕಳೆದಿದ್ದಾನೆ. ಈತ ಮೂರು ವರ್ಷದಿಂದ ರೂಪೇಶ್ ಕುಮಾರ್ ಬಳಿ ಕಾರ್ ಚಾಲಕನಾಗಿದ್ದ. ತುಂಗಾನಗರ ಠಾಣೆಗೆ ರೂಪೇಶ್ ಕುಮಾರ್ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read