ನಕಲಿ ದಾಖಲೆ ಸೃಷ್ಟಿಸಿ ರೈತನಿಗೆ ಬೆದರಿಕೆ: ಚಿತ್ರ ನಿರ್ಮಾಪಕ ಸೇರಿ ಹಲವರ ವಿರುದ್ಧ ಕೇಸ್ ದಾಖಲು

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ವ್ಯಕ್ತಿಯೊಬ್ಬರ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಜಮೀನು ಖಾಲಿ ಮಾಡುವಂತೆ ಜೀವ ಬೆದರಿಕೆ ಹಾಕಿದ ಆರೋಪದಡಿ ಚಿತ್ರ ನಿರ್ಮಾಪಕ ಮತ್ತು ಆತನ ಸಹಚಾರ ವಿರುದ್ಧ ಬೆಳ್ಳಂದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಜೀವ ನಗರದ ನಿವಾಸಿ ರಾಮಮೂರ್ತಿ(70) ಎಂಬುವರು ನೀಡಿದ ದೂರಿನ ಮೇರೆಗೆ ಕನ್ನಡದ ‘ದಿಯಾ’ ಚಿತ್ರದ ನಿರ್ಮಾಪಕ ಕೃಷ್ಣ ಚೈತನ್ಯ, ಸಚಿನ್ ನಾರಾಯಣ್, ಸತ್ಯನಾರಾಯಣ ರೆಡ್ಡಿ ಮತ್ತು ಸಹಚರರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದೂರುದಾರ ರಾಮಮೂರ್ತಿ ಅವರು 2005 ರಲ್ಲಿ ಶಿವರಾಮ ರೆಡ್ಡಿ ಅವರ ಕುಟುಂಬದಿಂದ ವರ್ತೂರು ಹೋಬಳಿ ಕಸವನಹಳ್ಳಿ ಗ್ರಾಮದ ಸರ್ವೇ ನಂಬರ್ 52 ರಲ್ಲಿ 3.35 ಎಕರೆ ಜಮೀನನ್ನು ಶುದ್ಧ ಕ್ರಯಕ್ಕೆ ಖರೀದಿಸಿದ್ದರು. ಈ ಜಮೀನಿನಲ್ಲಿ ನರ್ಸರಿ ಮಾಡುವ ಉದ್ದೇಶದಿಂದ ಆಗಸ್ಟ್ 10ರಂದು ಶಶಿಕಲಾ ಮತ್ತು ಕೋದಂಡಾಚಾರಿ ಅವರಿಗೆ ಭೋಗ್ಯದ ಕರಾರು ಮಾಡಿಕೊಟ್ಟಿದ್ದರು.

ಆಗಸ್ಟ್ 13ರಂದು ಬೆಳಿಗ್ಗೆ 10.30 ಕ್ಕೆ ರಾಮಮೂರ್ತಿ ಮತ್ತು ಶಶಿಕಲಾ ಅವರು ಜಮೀನಿನಲ್ಲಿದ್ದ ವೇಳೆ ಮೂರು ಕಾರ್ ಗಳಲ್ಲಿ ಆರೋಪಿಗಳಾದ ಕೃಷ್ಣ ಚೈತನ್ಯ, ಸತ್ಯನಾರಾಯಣ ರೆಡ್ಡಿ ಹಾಗೂ ಅವರ ಐದಾರು ಮಂದಿ ಸಹಚರರು ಅಲ್ಲಿಗೆ ಬಂದು ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದ್ದು, ನಕಲಿ ದಾಖಲೆ ತೋರಿಸಿ ಕೂಡಲೇ ಜಮೀನು ಖಾಲಿ ಮಾಡುವಂತೆ ಗಲಾಟೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read