ನಿರ್ಬಂಧಿತ ಪ್ರದೇಶದಲ್ಲಿ ವೈದ್ಯರ ಮೋಜು-ಮಸ್ತಿ; ನಾಲ್ವರ ವಿರುದ್ಧ ಕೇಸ್

ಜಾಂಬೋಟಿ ಅಭಯಾರಣ್ಯದಲ್ಲಿ ಮೋಜು-ಮಸ್ತಿ: ವೈದ್ಯರು ಸೇರಿ ನಾಲ್ವರ ವಿರುದ್ಧ ಕೇಸ್‌

ನಿರ್ಬಂಧವಿದ್ದರೂ ಸಹ ಸಂರಕ್ಷಿತ ಅಭಯಾರಣ್ಯಕ್ಕೆ ತೆರಳಿ ಗುಂಡು – ತುಂಡಿನ ಪಾರ್ಟಿ ಮಾಡಿದ ಮೂವರು ವೈದ್ಯರು ಸೇರಿದಂತೆ ನಾಲ್ವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.

ಇಂತಹದೊಂದು ಘಟನೆ ಬೆಳಗಾವಿ ಜಿಲ್ಲೆ, ಖಾನಾಪುರ ತಾಲೂಕಿನ ಜಾಂಬೋಟಿ ಸಂರಕ್ಷಿತ ಅಭಯಾರಣ್ಯದ ಭಟವಾಡ ಜಲಪಾತದ ಬಳಿ ನಡೆದಿದ್ದು, ಬೆಳಗಾವಿಯ ಡಾ. ಶಿವಕುಮಾರ ಪುರಾಣಿಕ ಮಠ, ಡಾ. ಸಂತೋಷ ರೇವಣ್ಣವರ, ಡಾ. ಸಂತೋಷ್ ಏಣಗಿಮಠ ಹಾಗೂ ವಾಹನ ಚಾಲಕ ಪ್ರವೀಣ ಕಲಗುಡಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಇವರುಗಳು ಹೆಸ್ಕಾಂ ಗೆ ಸೇರಿದ ವಾಹನದಲ್ಲಿ ಜುಲೈ 30 ರಂದು ಜಲಪಾತಕ್ಕೆ ತೆರಳಿದ್ದು, ಅಲ್ಲಿ ಮಾಂಸದ ಅಡುಗೆ ತಯಾರಿಸಿದ್ದಲ್ಲದೆ ಮದ್ಯ ಸೇವಿಸಿದ್ದರು. ಸ್ಥಳೀಯರು ಈ ಕುರಿತಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ಅವರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ನಂತರ ತಲಾ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read