ಕೊರೊನಾ ಲಸಿಕೆ ಪಡೆದ ಕೆಲವರಲ್ಲಿ ಹೃದಯದ ಉರಿಯೂತ ಸಮಸ್ಯೆ

ನವದೆಹಲಿ: ಕೋರೊನಾ ಲಸಿಕೆ ಪಡೆದ ಕೆಲವರಲ್ಲಿ ಹೃದಯದ ಉರಿಯೂತ ಸಮಸ್ಯೆ ಕಾಣಿಸಿಕೊಂಡಿದೆ. ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯದ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿದ್ದು, ಸೈನ್ಸ್ ಇಮ್ಮುನಾಲಜಿ ನಿಯತಕಾಲಿಕೆಯಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.

ಆಧ್ಯಯನದ ಪ್ರಕಾರ ವಿಜ್ಞಾನಿಗಳು ನೀಡಿರುವ ಮಾಹಿತಿಯಂತೆ ಕೊರೋನಾ ಲಸಿಕೆ ಪಡೆದ ನಂತರ ಕೆಲವರಲ್ಲಿ ಹೃದಯದ ಉರಿಯೂತ ಸಮಸ್ಯೆ ಕಂಡು ಬಂದಿದೆ. ದೇಹದಲ್ಲಿ ರೋಗನಿರೋಧಕ ಶಕ್ತಿಗೆ ಕಾರಣವಾಗುವ ಜೀವಕೋಶಗಳ ಪ್ರತಿಕ್ರಿಯೆ ಇದಕ್ಕೆ ಕಾರಣವೆಂದು ಹೇಳಲಾಗಿದೆ.

ಲಸಿಕೆಯಿಂದ ಉತ್ಪತ್ತಿಯಾಗುವ ಪ್ರತಿಕಾಯಗಳು ಇದಕ್ಕೆ ಕಾರಣವಲ್ಲ. ಲಸಿಕೆ ಪಡೆದ ಕೆಲವು ವ್ಯಕ್ತಿಗಳಲ್ಲಿ ಪ್ರತಿಕಾಯ ಉತ್ಪತ್ತಿಯಾಗುವುದರೊಂದಿಗೆ ಸೈಟೋಕಿನ್ ಎಂಬ ಪ್ರೊಟೀನ್ ಗಳು ಸೃಷ್ಟಿಯಾಗುತ್ತವೆ. ಉರಿಯೂತ ನಿಯಂತ್ರಣಕ್ಕೆ ಈ ಸೈಟೋಕಿನ್ ಗಳು ನೆರವಾಗುತ್ತವೆ. ಆದರೆ, ಲಸಿಕೆ ಪಡೆದ ಕೆಲವರಲ್ಲಿ ಸೈಟೋಕೀನ್ ಪ್ರೋಟೀನ್ ಗಳು ಹೆಚ್ಚಿನ ಪ್ರಮಾಣದಲ್ಲಿ ಮತ್ತು ವೇಗವಾಗಿ ಉತ್ಪತ್ತಿಯಾಗುವುದರಿಂದ ಆರೋಗ್ಯ ತೊಂದರೆ ಕಾಣಿಸಿಕೊಳ್ಳುತ್ತವೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read