ಹಾಡಹಗಲೇ ರಸ್ತೆ ಬದಿ ಕಾರ್ ನಲ್ಲಿ ಸೆಕ್ಸ್: ಬುದ್ಧಿವಾದ ಹೇಳಿದ ಎಸ್ಐ ಕೊಲೆ ಯತ್ನ

ಬೆಂಗಳೂರು: ಹಾಡಹಗಲೇ ರಸ್ತೆ ಬದಿ ಕಾರ್ ನಲ್ಲಿ ಬೆತ್ತಲಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಯುವಕ, ಯುವತಿಗೆ ಬುದ್ಧಿವಾದ ಹೇಳಲು ಮುಂದಾದ ಎಸ್ಐ ಮೇಲೆ ಕಾರ್ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 20ರಂದು ಮಧ್ಯಾಹ್ನ ನಡೆದಿದೆ.

ಉಪಕಾರ ಲೇಔಟ್ ನ ಮೂರನೇ ಮುಖ್ಯರಸ್ತೆಯ ಮೂರನೇ ಅಡ್ಡರಸ್ತೆಯಲ್ಲಿ ಘಟನೆ ನಡೆದಿದೆ. ನಗರ ಶಸ್ತ್ರ ಮೀಸಲು ಪಡೆ ಸಿಎಆರ್ ಪಶ್ಚಿಮ ವಿಭಾಗದ ರಿಸರ್ವ್ ಸಬ್ ಇನ್ಸ್ಪೆಕ್ಟರ್ ಕೆ. ಮಹೇಶ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವರು ನೀಡಿದ ದೂರಿನ ಮೇರೆಗೆ ಅಪರಿಚಿತ ಜೋಡಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮಹೇಶ್ ಜನವರಿ 20ರ ಮಧ್ಯಾಹ್ನ ಊಟ ಮುಗಿಸಿ ವಾಕಿಂಗ್ ಮಾಡಲು ಮನೆ ಎದುರಿನ ರಸ್ತೆಗೆ ಬಂದಿದ್ದಾರೆ. ಬಿಳಿ ಬಣ್ಣದ ಕಾರ್ ನಿಂತಿರುವುದು ಕಂಡುಬಂದಿದ್ದು ಮುಂದೆ ಹೋಗಿ ಹಿಂದೆ ನೋಡಿದಾಗ ಕಾರ್  ಹಿಂಬದಿ ಸೀಟ್ ನಲ್ಲಿ ಯುವಕ, ಯುವತಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಯುವ ಜೋಡಿಗೆ ಬುದ್ಧಿವಾದ ಹೇಳಲು ಮುಂದಾದ ಮಹೇಶ್ ಕಾರ್ ಮುಂದೆ ಬಂದು ನೋಂದಣಿ ಸಂಖ್ಯೆ ನೋಡಲು ಕೆಳಗೆ ಬಗ್ಗಿದಾಗ ಹಿಂಬದಿ ಸೀಟಿನಲ್ಲಿದ್ದ ಯುವಕ ತಕ್ಷಣ ಚಾಲಕನ ಸೀಟಿಗೆ ಬಂದು ಏಕಾಏಕಿ ಕಾರ್ ಸ್ಟಾರ್ಟ್ ಮಾಡಿ ಮಹೇಶ್ ಮೇಲೆ ಹತ್ತಿಸಲು ಪ್ರಯತ್ನಿಸಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಮಹೇಶ್ ಕಾರ್  ಬಾನೆಟ್ ಮೇಲೆ ಜಿಗಿದು ಬಿಗಿಯಾಗಿ ಹಿಡಿದುಕೊಂಡಿದ್ದಾರೆ.

ಬಳಿಕ ಹಿಮ್ಮುಖವಾಗಿ ಕಾರ್ ಚಾಲನೆ ಮಾಡಿದ ಯುವಕ ದಿಢೀರ್ ಬ್ರೇಕ್ ಹಾಕಿದ್ದರಿಂದ ಮಹೇಶ್ ಕಳಕ್ಕೆ ಬಿದ್ದಿದ್ದಾರೆ. ಮೈ ಕೈಗೆ ಗಾಯವಾಗಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ಯುವಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. ಸಾರ್ವಜನಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹೇಶ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಮಹೇಶ್ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read