ಕದ್ದ ಕಾರನ್ನು ಅರ್ಧದಲ್ಲೇ ಬಿಟ್ಟು ಕ್ಷಮಾಪಣಾ ಪತ್ರ ಅಂಟಿಸಿ ಹೋದ ಕಳ್ಳ!

ಜೈಪುರ: ಕಳ್ಳನೊಬ್ಬ ಕದ್ದ ಕಾರನ್ನು ಮಾರ್ಗ ಮಧ್ಯೆಯೇ ಬಿಟ್ಟು ಹೋಗಿದ್ದು, ಕಾರಿಗೆ ಕ್ಷಮಾಪಣಾ ಪತ್ರ ಅಟ್ಟಿಸಿ ಹೋಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ದೆಹಲಿಯಲ್ಲಿ ಕದ್ದ ಎಸ್ ಯುವಿ ಕಾರನ್ನು ರಾಜಸ್ಥಾನದಲ್ಲಿ ಕಳ್ಳ ಬಿಟ್ಟು ಹೋಗಿದ್ದು, ಕಾರಿನ ಗಾಜಿಗೆ ಕ್ಷಮಾಪಣ ಪತ್ರ ಬರೆದು ಐ ಲವ್ ಇಂಡಿಯಾ ಎಂದು ಬರೆದು ಹೋಗಿದ್ದಾನೆ. ಜೊತೆಗೆ ಕಾರಿನ ವಿಂಡ್ ಸ್ಕ್ರೀನ್ ನಲ್ಲಿ ಬರೆದಿರುವ ಚೀಟಿ ಇದೀಗ ಭಾರಿ ವೈರಲ್ ಆಗಿದೆ. ಈ ಕಾರನ್ನು ದೆಹಲಿಯಿಂದ ಕಳುವು ಮಾಡಲಾಗಿದೆ. ದಯವಿಟ್ಟು ಪೊಲೀಸರಿಗೆ ತುರ್ತು ಕರೆ ಮಾಡಿ ತಿಳಿಸಿ ಎಂದು ಚೀಟಿಯಲ್ಲಿ ಬರೆಯಲಾಗಿದೆ.

ಜೈಪುರದ ಬಿಕಾನೇರ್ ಹೆದ್ದಾರಿಯ ರಸ್ತೆ ಬದಿಯ ಹೋಟೆಲ್ ಬಳಿ ವಾಹನವೊಂದು ನಿಲ್ಲಿಸಿರುವುದನ್ನು ಕಂಡ ನಿವಾಸಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಕಾರಿನ ಹಿಂದಿನ ಗ್ಲಾಸ್ ಗೆ ಚೀಟಿ ಅಂಟಿಸಿರುವುದು ಕಂಡುಬಂದಿದೆ. ಈ ಕಾರನ್ನು ದೆಹಲಿಯ ಪಾಲಂನಿಂದ ಕಳುವು ಮಾಡಲಾಗಿದೆ ಕ್ಷಮಿಸಿ ಎಂದು ಬರೆಯಲಾಗಿದೆ. ಇನ್ನೊಂದು ಚೀಟಿಯಲ್ಲಿ DL 9 CA Z2937 ಎಂಬ ಕಾರಿನ ಸಂಖ್ಯೆ ಬರೆಯಲಾಗಿದೆ. ಇದರಿಂದ ಕಾರಿನ ಮಾಲೀಕನನ್ನು ಕಂಡು ಹಿಡಿಯಲು ಪೊಲೀಸರಿಗೆ ಸಹಾಯವಾಗಿದೆ. ಅಲ್ಲದೇ ಕಾರಿಗೆ ಅಂಟಿಸಿದ್ದ ಮತ್ತೊಂದು ಚೀಟಿಯಲ್ಲಿ ಐ ಲವ್ ಇಂಡಿಯಾ ಎಂದು ಬರೆದಿತ್ತು.

ಅಕ್ಟೋಬರ್ 10ರಂದು ದೆಹಲಿಯ ಪಾಲಂ ಕಾಲೋನಿಯ ನಿವಾಸಿ, ಕಾರು ಮಾಲೀಕ ಕಾರು ಕಳುವಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದರು. ಇದೀಗ ಕಾರು ಕದ್ದ ಕಳ್ಳ ದೆಹಲಿಯಿಂದ 450ಕಿ.ಮೀ ದೂರದಲ್ಲಿ ಬಿಕಾನೇರ್ ಬಳಿ ಕಾರು ಬಿಟ್ಟು, ಕ್ಷಮಾಪಣ ಪತ್ರ ಅಂಟಿಸಿ ಹೋಗಿದ್ದಾನೆ. ಅಪರಾಧ ಕೃತ್ಯಕ್ಕೆ ಕಾರನ್ನು ಕದ್ದು ಬಳಸಿ ಬಳಿಕ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read