ಕಾರ್ ಕಳವು ಪ್ರಕರಣ: 27 ವರ್ಷ ಬಳಿಕ ಕಳ್ಳ ಪತ್ತೆ, 14 ವರ್ಷದ ಹಿಂದೆಯೇ ಸಾವು

ಮಂಗಳೂರು: ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿ ಸಮೀಪ ಮನೆ ಎದುರು ನಿಲ್ಲಿಸಿದ ಮಾರುತಿ ಒಮ್ನಿ ಕಾರು ಕಳವು ಮಾಡಿದ್ದ ಆರೋಪಿ 27 ವರ್ಷದ ಬಳಿಕ ಪತ್ತೆಯಾಗಿದ್ದಾನೆ. ಆದರೆ, 14 ವರ್ಷದ ಹಿಂದೆಯೇ ಕಾರು ಕಳ್ಳ ಮೃತಪಟ್ಟಿದ್ದಾನೆ.

ಪಡುಬಿದ್ರಿಯ ಜೇಮ್ಸ್ ಡಯಾನ್ ಅಂದ್ರಾದೆ ಅವರ ಮಾರುತಿ ಕಾರ್ 1997ರ ಸೆಪ್ಟಂಬರ್ 29ರಂದು ರಾತ್ರಿ ಕಳುವಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪಡುಬಿದ್ರಿ ಪೊಲೀಸರು ಶಿವಮೊಗ್ಗ ಜಿಲ್ಲೆ ಸಾಗರದ ಸಮೀಪ ಕಾರ್ ಪತ್ತೆ ಹಚ್ಚಿದ್ದರು. ಸಾಗರ ನಿವಾಸಿ ಹುಚ್ಚಪ್ಪ ಎಂಬವನನ್ನು ಬಂಧಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಸಾಗರದ ಬಸವರಾಜ್ ಮತ್ತು ದುರ್ಗಾನಾಥ್ ಅವರೊಂದಿಗೆ ಕಾರ್ ಕಳವು ಮಾಡಿದ ಬಗ್ಗೆ ಹುಚ್ಚಪ್ಪ ಮಾಹಿತಿ ನೀಡಿದ್ದ.

ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಬಸವರಾಜ್ ಮತ್ತು ದುರ್ಗಾನಾಥ್ ಕೋರ್ಟ್ ಗೆ ಹಾಜರಾಗದೆ ತಲೆಮರಿಸಿಕೊಂಡಿದ್ದು, ಇಬ್ಬರ ವಿರುದ್ಧ ಎಲ್.ಪಿ.ಸಿ. ವಾರಂಟ್ ಜಾರಿಯಾಗಿತ್ತು.

27 ವರ್ಷದ ನಂತರ ಪಡುಬಿದ್ರಿ ಠಾಣೆ ಪೋಲಿಸರು ಆರೋಪಿಗಳ ಪತ್ತೆಗೆ ಸಾಗರಕ್ಕೆ ತೆರಳಿದ ಸಂದರ್ಭದಲ್ಲಿ ಬಸವರಾಜು ಆತನ ಹುಟ್ಟೂರು ಶಿವಮೊಗ್ಗದಲ್ಲಿ 14 ವರ್ಷದ ಹಿಂದೆ ಮೃತಪಟ್ಟಿರುವ ಮಾಹಿತಿ ಗೊತ್ತಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಆತನ ಮರಣ ದೃಢೀಕರಣ ಪತ್ರ ಪಡೆದು ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಮತ್ತೊಬ್ಬ ಆರೋಪಿ ದುರ್ಗಾನಾಥ್ ನನ್ನು ಎರಡು ತಿಂಗಳ ಹಿಂದೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read