BIG NEWS: ದೆಹಲಿಯ ಕಳ್ಳರಿಗೂ ಮಾದರಿಯಾಯಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ: ಕಾಂಗ್ರೆಸ್ ನಾಯಕರ ಕಾಲೆಳೆದ BJP

ಬೆಂಗಳೂರು: ಕದ್ದ ಕಾರನ್ನು ಕಳ್ಳನೊಬ್ಬ ಮಾರ್ಗ ಮಧ್ಯೆಯೇ ಬಿಟ್ಟು, ಕಾರಿಗೆ ಕ್ಷಮಾಪಣಾ ಪತ್ರ ಅಂಟಿಸಿ ಹೋಗಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಪ್ರಕರಣವನ್ನು ಟ್ಯಾಗ್ ಮಾಡಿರುವ ರಾಜ್ಯ ಬಿಜೆಪಿ ಕಾಂಗ್ರೆಸ್ ನಾಯಕರ ಕಾಲೆಳೆದಿದೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ನಿವೇಶನ ವಾಪಾಸ್ ನೀಡಿರುವ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ರಾಜ್ಯ ಬಿಜೆಪಿ, ದೆಹಲಿಯ ಕಳ್ಳರಿಗೂ ಮಾದರಿಯಾಯಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಎಂದು ಟೀಕಿಸಿದೆ

ಸಿದ್ದರಾಮಯ್ಯ, ಖರ್ಗೆ ಅವರು ಅಕ್ರಮವಾಗಿ ಪಡೆದ ಸೈಟ್ ವಾಪಸ್ ನೀಡಿದ ಮಾದರಿಯಲ್ಲಿಯೇ, ಕಳ್ಳತನದಿಂದ ಕದ್ದ ಕಾರನ್ನು ಅರ್ಧದಲ್ಲೇ ಬಿಟ್ಟು ಕ್ಷಮಾಪಣಾ ಪತ್ರ ಅಂಟಿಸಿರುವ ಕಳ್ಳರು ರಾಜ್ಯದ ಮುಖ್ಯಮಂತ್ರಿಗಳ ಮಾದರಿಯನ್ನು ಅನುಸರಿಸಿದ ಅಪರೂಪದ ಘಟನೆ ನಡೆದಿದೆ.

ಈ ರೀತಿ ಕದ್ದ ಮಾಲನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿ “ಕಾಂಗ್ರೆಸ್ ಮಾದರಿ”ಯನ್ನು ಅನುಸರಿಸುವ ಕಳ್ಳರಿಗೆ “ಪ್ರಾಮಾಣಿಕ ಕಳ್ಳ” ಎಂಬ ರಾಜ್ಯ ಪ್ರಶಸ್ತಿ ಘೋಷಿಸಿದರೂ ಅಚ್ಚರಿಯಿಲ್ಲ ಎಂದು ಲೇವಡಿ ಮಾಡಿದೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read