ರಾಯಗಢ: ಚಲಿಸುತ್ತಿದ ಕಾರಿನ ಮೇಲೆ ಬೃಹತ್ ಬಂಡೆ ಉರುಳಿಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದು, ಪತಿ ಹಾಗೂ ಮಗ ಪಾರಾಗಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಕೊಂಡಿಥರ್ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ತುಮ್ಹಿನಿ ಘಟ್ ಬಳಿ ಈ ದುರಂತ ಸಂಭವಿಸಿದೆ. ಪುಣೆ ನಿವಾಸಿ ಸ್ನೇಹಲ್ (43) ಮೃತ ಮಹಿಳೆ. ಪತಿ ಹಾಗೂ ಮಗನೊಂದಿಗೆ ಪುಣೆಯಿಂದ ಮಂಗಾವ್ ಗೆ ಪ್ರಯಾಣಿಸುತ್ತಿದ್ದರು. ಸ್ನೇಹಲ್ ಕಾರಿನ ಮುಂದಿನ ಸೀಟ್ ನಲ್ಲಿ ಕುಳಿತಿದ್ದರು.
ಘಾಟ್ ರಸ್ತೆಯಲ್ಲಿ ಕಾರ್ನ ಮೇಲೆ ಬೃಹತ್ ಬಂಡೆ ಉರುಳಿ ಬಿದ್ದಿದೆ. ಕಾರಿನ ಸನ್ ರೂಫ್ ಮುರಿದು ಮಹಿಳೆಯ ಮೇಲೆ ಬಿದ್ದಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

 
			 
		 
		 
		 
		 Loading ...
 Loading ... 
		 
		