ಶಿವಮೊಗ್ಗ: ರಸ್ತೆ ಪಕ್ಕದ ತಡೆಗೋಡೆಗೆ ಕಾರ್ ಡಿಕ್ಕಿಯಾಗಿ ಸಹೋದರರು ಸ್ಥಳದಲ್ಲೇ ಮೃತಪಟ್ಟ ಘಟನೆ ಶಿಕಾರಿಪುರ ಹೊರವಲಯದ ಕೊಟ್ಟ ಕ್ರಾಸ್ ಬಳಿ ಶುಕ್ರವಾರ ನಡೆದಿದೆ.
ಜೈನಲ್ಲಾ(26), ಕೋಯಲ್(18) ಮೃತಪಟ್ಟ ಸಹೋದರರು. ಅಪಘಾತದಲ್ಲಿ ಚಾಲಕ ಅಭಿಷೇಕ್(24) ಗಂಭೀರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳ್ಳಿಗಾವಿ ಗ್ರಾಮದ ಮೂವರು ಕೆಲಸದ ನಿಮಿತ್ತ ಬಾಣಾವರಕ್ಕೆ ತೆರಳಿ ವಾಪಸ್ ಆಗುವ ಸಂದರ್ಭದಲ್ಲಿ ಶಿಕಾರಿಪುರ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ತಡೆಗೋಡೆಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.