ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಹೊತ್ತಿ ಉರಿದ ಕಾರು; ಭಾರಿ ಟ್ರಾಫಿಕ್ ನಿಂದ ಸಂಚಾರ ಅಸ್ತವ್ಯಸ್ತ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭಾನುವಾರ ಕಾರೊಂದು ಬೆಂಕಿಗೆ ಆಹುತಿಯಾಗಿದ್ದು, ಹೆದ್ದಾರಿಯಲ್ಲಿ ಟ್ರಾಫಿಕ್ ಅಸ್ತವ್ಯಸ್ತವಾದ ಘಟನೆ ನಡೆದಿದೆ. ಖಲಾಪುರ್ ಟೋಲ್ ಪ್ಲಾಜಾದಿಂದ ಖಂಡಾಲಾವರೆಗಿನ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಭಾರಿ ಟ್ರಾಫಿಕ್ ಜಾಮ್ ಕಂಡುಬಂದಿದೆ.

ಸುದೀರ್ಘ ವಾರಾಂತ್ಯದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಪ್ರವಾಸಿಗರ ನೂಕುನುಗ್ಗಲು ಉಂಟಾಗಿದೆ. ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಈ ಘಟನೆಯಿಂದ ತೊಂದರೆಯಾಗಿದೆ. ಶನಿವಾರದಂದು, ಮುಂಬೈ ಮತ್ತು ಲೋನಾವಾಲಾ ನಡುವೆ ಟ್ರಾಫಿಕ್ ದಟ್ಟಣೆ ಕಂಡು ಬಂತು. ಲೋನಾವಾಲಾದಲ್ಲಿ 10 ಕಿಲೋಮೀಟರ್‌ಗಳವರೆಗೆ ಉದ್ದವಾದ ವಾಹನಗಳ ಸಾಲುಗಳು ಕಂಡುಬಂದವು. ಇದರಿಂದ ವಾಹನ ಸವಾರರು ಪರದಾಡುವಂತಾಯಿತು.

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಗುರುವಾರ ಟ್ರಕ್ ವೊಂದು 11 ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ನಡೆದ ಅಪಘಾತ ಇದಾಗಿದೆ. ಮುಂಬೈನಿಂದ 75 ಕಿಲೋಮೀಟರ್ ದೂರದಲ್ಲಿರುವ ರಾಯಗಢ ಜಿಲ್ಲೆಯ ಖೋಪೋಲಿ ಬಳಿ ಭಾನುವಾರ ಮಧ್ಯಾಹ್ನ 12:55 ರ ಸುಮಾರಿಗೆ ಈ ಘಟನೆ ನಡೆದಿದೆ.

https://twitter.com/SudiptoBasu10/status/1652543041713102848?ref_src=twsrc%5Etfw%7Ctwcamp%5Etweetembed%7Ctwterm%5E1652543041713102848%7Ctwgr%5E0d35755cb89f58b29f365b096f9b9afc5d6f3234%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fwatch-long-weekend-rush-leads-to-heavy-traffic-snarls-on-mumbai-pune-expressway

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read