ಅಡ್ಡಾದಿಡ್ದಿ ಕಾರು ಚಲಾಯಿಸಿ ಮಗು ಸಾವು ಪಕರಣಕ್ಕೆ ಟ್ವಿಸ್ಟ್; ಕಾರ್ ವಾಷ್ ಮಾಡುವಾಗ ಎಕ್ಸಲೇಟರ್ ಒತ್ತಿದ ಬಾಲಕ; ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು

ಬೆಂಗಳೂರು: ಪೋಷಕರ ನಿರ್ಲಕ್ಷ ಮಗುವಿನ ಪ್ರಾಣವನ್ನೇ ತೆಗೆದುಬಿಟ್ಟಿದೆ. ಅಡ್ಡಾದಿಡ್ಡಿ ಕಾರು ಚಲಾಯಿಸಿಕೊಂಡು ಬಂದ ಕಾರು ಚಾಲಕ 5 ವರ್ಷದ ಮಗು ಮೇಲೆ ಕಾರು ಹತ್ತಿಸಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದು ಚಾಲಕನಿಂದಾದ ಅಪಘಾತವಲ್ಲ, ಬಾಲಕನೊಬ್ಬನ ಎಡವಟ್ಟಿನಿಂದ ಮಗು ಪ್ರಾಣಕಳೆದುಕೊಂಡಿದೆ.

ತಂದೆಯ ಜೊತೆ ಕಾರು ವಾಷ್ ಮಡುವಾಗ ಬಾಲಕ ಏಕಾಏಕಿ ಕಾರಿನೊಳಗೆ ಹೋಗಿ ಎಕ್ಸಲೇಟರ್ ಒತ್ತಿದ್ದಾನೆ. ಪರಿಣಾಮ ಕಾರು ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದಿದೆ.

ಘಟನೆಯಲ್ಲಿ 5 ವರ್ಷದ ಆರವ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರಿನ ಚಕ್ರದಡಿ ಸಿಲುಕಿದ ಮಗು ಕೊನೆಯುಸಿರೆಳೆದಿದೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

ಭಾನುವಾರವಾದ್ದರಿಂದ ಮನೆಯಂಗಳದ ಬಳಿಯೇ ತಂದೆಯೊಬ್ಬ ಕಾರು ತೊಳೆಯುತ್ತಿದ್ದರು. ಈ ವೇಳೆ ಬಂದ 15 ವರ್ಷದ ಮಗ ಕಾರಿನ ಡ್ರೈವಿಂಗ್ ಸೀಟ್ ನಲ್ಲಿ ಕುಳಿತು ಎಕ್ಸಲೇಟರ್ ತುಳಿದಿದ್ದಾನೆ. ಏಕಾಏಕಿ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿದಿದ್ದು, ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಬಳಿಕ ಕಾರು ರಸ್ತೆ ಬದಿ ಇದ್ದ ಬೈಕ್ ಗೂ ಗುದ್ದಿದೆ. 15 ವರ್ಷದ ಬಾಲಕನ ಎಡವಟ್ಟಿಗೆ 5 ವರ್ಷದ ಮಗುವಿನ ಜೀವವೇ ಹೋಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read