ಜೀರ್ಣಕ್ರಿಯೆ ಉತ್ತಮಗೊಳಿಸುತ್ತೆ ʼಕ್ಯಾಪ್ಸಿಕಂʼ

ಕ್ಯಾಪ್ಸಿಕಂನಿಂದ ಬೋಂಡಾ, ಕರಿ ತಯಾರಿಸಬಹುದು ಎಂದು ಸರಳವಾಗಿ ಹೇಳುತ್ತೇವೆ. ಆದರೆ ಅದರಿಂದ ದೇಹದ ಮೇಲಾಗುವ, ಆರೋಗ್ಯದ ಪ್ರಯೋಜನಗಳ ಬಗ್ಗೆ ನಮಗೆ ತಿಳಿದಿಲ್ಲ.

ಹೃದಯದ ಆರೋಗ್ಯಕ್ಕೆ ಅಗತ್ಯವಿರುವ ಲೈಕೋಪಿನ್ ಎಂಬ ಹೋರಾಡುವ ಗುಣವುಳ್ಳ ಪೋಷಕಾಂಶ ಕ್ಯಾಪ್ಸಿಕಮ್ನಲ್ಲಿದೆ. ವಿಟಮಿನ್ ಬಿ6 ಇದರಲ್ಲಿದ್ದು, ದೇಹದಲ್ಲಿರುವ ಹೋಮೋಸಿಸ್ಟೈನ್ ಮಟ್ಟವನ್ನು ತಗ್ಗಿಸುತ್ತದೆ. ಇದರಿಂದ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತದೆ.

ತೂಕ ಇಳಿಸುವವರ ಪಟ್ಟಿಯಲ್ಲಿ ನೀವಿದ್ದರೆ ಕ್ಯಾಪ್ಸಿಕಮ್ ಸೇವಿಸಿ. ಏಕೆಂದರೆ ಇದರಲ್ಲಿ ಕಡಿಮೆ ಕ್ಯಾಲೋರಿಗಳಿವೆ. ಜೀರ್ಣಕ್ರಿಯೆಯನ್ನು ಕೂಡ ಉತ್ತಮಗೊಳಿಸುತ್ತದೆ.

ನೋವು ನಿವಾರಕವಾಗಿಯೂ ಕೆಲಸ ಮಾಡುವ ಇದು ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಇದರಲ್ಲಿ ದಿನದ ಆವಶ್ಯಕತೆಗೆ ಬೇಕಾಗಿರುವುದಕ್ಕಿಂತಲೂ 3 ಪಟ್ಟು ಹೆಚ್ಚು ಪ್ರಮಾಣದ ವಿಟಮಿನ್ ಸಿ ಇದೆ. ದೇಹದಲ್ಲಿ ಕಬ್ಬಿಣ ಅಂಶದ ಕೊರತೆಯನ್ನೂ ಕೆಂಪು ಕ್ಯಾಪ್ಸಿಕಮ್ ನಿವಾರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read