ಬೆಂಗಳೂರು : ರಾಜ್ಯಾದ್ಯಂತ ಇಂದು ಭಾನುವಾರ ನಡೆದ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆಯಲ್ಲೂ ಭಾರಿ ಅಕ್ರಮ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಕೇಂದ್ರದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು 12.30ಕ್ಕೆ ಪರೀಕ್ಷೆ ಮುಗಿದರೂ ಒಂದು ಗಂಟೆ ತಡವಾಗಿ ಹೊರಗೆ ಬಂದಿದ್ದು, ಭಾರಿ ಅನುಮಾನ ವ್ಯಕ್ತವಾಗಿದೆ. ಇದಲ್ಲದೇ ಹಾಲ್ ಟಿಕೆಟ್ ಹಾಗೂ ಒಎಂಆರ್ ನಲ್ಲಿ ನಮೂದಿಸಿದ ನೋಂದಣಿ ಸಂಖ್ಯೆಯೂ ಕೂಡ ಬದಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆ ಅಕ್ರಮ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪರೀಕ್ಷೆಯು 12.30ಕ್ಕೆ ಮುಗಿದ ತಕ್ಷಣ ಅಭ್ಯರ್ಥಿಗಳು ಹೊರಬರಬೇಕಿತ್ತು. ಆದರೆ, ಈ ಕೇಂದ್ರದಲ್ಲಿ 1.20ರವರೆಗೆ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಲ್ಲೇ ಇದ್ದರು. ಹಾಲ್ ಟಿಕೆಟ್ ನಂಬರ್ ಮತ್ತು ಓಎಂಆರ್ ಶೀಟ್ ನಂಬರ್ ಕೂಡ ಅದಲು ಬದಲಾಗಿದ್ದು, ಪರೀಕ್ಚೆ ಬರೆದ ಅಭ್ಯರ್ಥಿಗಳಿಗೆ ಆತಂಕ ಶುರುವಾಗಿದೆ.