ಶೇ. 7.25 ರಷ್ಟು ಬಡ್ಡಿಯ ಹೊಸ ಠೇವಣಿ ಯೋಜನೆ ಆರಂಭಿಸಿದ ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. 400 ದಿನಗಳ ಹೊಸ ಠೇವಣಿ ಯೋಜನೆಗಳನ್ನು ಕೆನರಾ ಬ್ಯಾಂಕ್ ಆರಂಭಿಸಿದೆ.

ಶೇಕಡ 7.15 ರಷ್ಟು ಬಡ್ಡಿ ದರದ ಯೋಜನೆಯಡಿ 25,000 ರೂ.ನಿಂದ 2 ಕೋಟಿ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಅವಧಿಗೆ ಮೊದಲು ಠೇವಣಿ ಹಿಂಪಡೆಯುವುದು ಅಥವಾ ಠೇವಣಿಯ ಒಂದಿಷ್ಟು ಪಾಲನ್ನು ಪಡೆದುಕೊಳ್ಳಲು ಈ ಯೋಜನೆಯಲ್ಲಿ ಅವಕಾಶವಿದೆ.

ಅವಧಿಗೆ ಮೊದಲು ಠೇವಣಿ ಹಣ ಹಿಂಪಡೆಯಲು, ಒಂದಿಷ್ಟು ಪಾಲನ್ನು ಹಿಂಪಡೆಯಲು ಅವಕಾಶ ಇಲ್ಲದ ಯೋಜನೆ ಅಡಿ 15 ಲಕ್ಷ ರೂ.ನಿಂದ 2 ಕೋಟಿ ಇರುವವರೆಗೆ ಹಣ ಹೂಡಿಕೆ ಮಾಡಬಹುದಾಗಿದ್ದು, ಇದಕ್ಕೆ ಶೇಕಡ 7.25 ರಷ್ಟು ಬಡ್ಡಿ ದರ ನೀಡಲಾಗುವುದು. ಈ ಯೋಜನೆಗಳಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇಕಡ 0.50 ರಷ್ಟು ಬಡ್ಡಿ ನೀಡಲಾಗುವುದು ಎಂದೂ ಕೆನರಾ ಬ್ಯಾಂಕ್ ಮಾಹಿತಿ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read