ಹುಟ್ಟುಹಬ್ಬದಂದೇ 80 ಲಕ್ಷದ ಒಡೆಯನಾದ ವ್ಯಕ್ತಿ: ಲಾಟರಿಯಿಂದ ಒಲಿದು ಬಂತು ಅದೃಷ್ಟ….!

ನಿಮ್ಮ ಜನ್ಮದಿನದಂದು ನಿಮಗೆ ಏನು ಗಿಫ್ಟ್​ ಸಿಕ್ಕರೆ ತುಂಬಾ ಖುಷಿಯಾಗುತ್ತದೆ ಎಂದು ಯಾರನ್ನಾದರೂ ಕೇಳಿದರೆ ಬಹುತೇಕ ಮಂದಿ ಹೇಳುವುದು ಲಕ್ಷ ಲಕ್ಷ ಹಣ ಸಿಕ್ಕಿಬಿಟ್ಟರೆ ಎಂದು. ಆದರೆ ಈ ವ್ಯಕ್ತಿಗೆ ಅದು ನಿಜವಾಗಿದೆ. ಕಳೆದ 50 ವರ್ಷಗಳಿಂದ ಲಾಟರಿಯಲ್ಲಿ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಹುಟ್ಟುಹಬ್ಬದ ದಿನ 80 ಲಕ್ಷ ರೂಪಾಯಿ ಗೆದ್ದಿದ್ದಾರೆ.

ಡ್ರೆಸ್ಡೆನ್ ಎಂಬ ಕೆನಡಾದ ವ್ಯಕ್ತಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 1980ರಿಂದಲೂ ಅದೃಷ್ಟ ಪರೀಕ್ಷೆ ಮಾಡುತ್ತಿದ್ದೆ. ಕಳೆದ ಬಾರಿ ಮಿನಿ-ಮಾರ್ಟ್‌ನಿಂದ 5 ಕೆನಡಾದ ಡಾಲರ್‌ ಅಂದರೆ ಸುಮಾರು 305 ರೂಪಾಯಿ ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದೆ. ಅದು ನನ್ನನ್ನು ಕೋಟಿ ಹತ್ತಿರ ಗಳಿಸುವಂತೆ ಮಾಡುತ್ತದೆ ಎಂದು ತಿಳಿದೇ ಇರಲಿಲ್ಲ.

ಇದು ನನಗೆ ಫೋನ್​ ಬಂದಾಗಲೇ ತಿಳಿದದ್ದು, ನನಗೆ 80 ಲಕ್ಷ ರೂಪಾಯಿ ಸಿಕ್ಕಿದೆ ಎಂದಿದ್ದಾರೆ. ನನ್ನ ಹುಟ್ಟುಹಬ್ಬದಂದೇ ಈ ಹಣ ನನಗೆ ಸಂದಾಯವಾಗಿದ್ದು, ನನ್ನ ಜೀವನದಲ್ಲಿ ಮರೆಯಲಾಗದ ಘಟನೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read