ಒಟ್ಟಾವಾ: ಕೆನಾಡದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಗುಂಡೇಟಿಗೆ ಬಲಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಭಾರತೀಯ ಮೂಲದ ವಿದ್ಯಾರ್ಥಿನಿ 21 ವರ್ಷದ ಹರ್ಸಿಮ್ರತ್ ರಾಂಧವಾ ಗುಂಡೇಟಿಗೆ ಬಲಿಯಾದ ವಿದ್ಯಾರ್ಥಿನಿ. ಪ್ರಕರಣ ಸಂಬಂಧ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಒಂಟಾರಿಯೊದ ನಯಾಗಾರ ಜಲಪಾತದ ಬಳಿ ಜೆರ್ಡೈನ್ ಪೋಸ್ಟರ್ (32) ಎಂಬಾತನನ್ನು ಹ್ಯಾಮಿಲ್ಟನ್ ಪೊಲೀಸರು ಬಂಧಿಸಿದ್ದಾರೆ. ಮೊಹಾಕ್ ಕಾಲೇಜಿನಲ್ಲಿ ಫಿಜಿಯೋಥೆರಪಿ ವ್ಯಾಸಂಗ ಮಾಡುತ್ತಿದ್ದ ಹರ್ಸಿಮ್ರತ್ ರಾಂಧವಾ, ಏಪ್ರಿಲ್ 17ರಂದು ಅಪ್ಪರ್ ಜೇಮ್ಸ್ ಸ್ಟ್ರೀಟ್ ಹಾಗೂ ಸೌತ್ ಬೆಂಡ್ ರಸ್ತೆಯ ಡಿವೈಡರ್ ನಲ್ಲಿ ಬಸ್ ನಿಲ್ದಾಣದ ಬಳಿ ನಿಂತಿದ್ದಳು. ಈ ವೇಳೆ ಗುಂಡಿನ ದಾಳಿ ನಡೆದಿದ್ದು, ಗುಂಡೇಟಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಳು.
ನಾಲ್ಕು ಕಾರುಗಳಲ್ಲಿ ಬಂದ ಎರಡು ದುಷ್ಕರ್ಮಿಗಳ ತಂಡದ ನಡುವೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ವಿದ್ಯಾರ್ಥಿನಿ ಗುಂಡೇಟಿಗೆ ಬಲಿಯಾಗಿದ್ದಾಳೆ ಎಂದು ತಿಳಿದುಬಂದಿದೆ.