ಟ್ರಾಫಿಕ್ ಪೊಲೀಸರು ನಿಯಮ ಉಲ್ಲಂಘಿಸಿದ ಬೈಕ್‌ನಿಂದ ಕೀಗಳನ್ನು ತೆಗೆಯಬಹುದಾ…..? ಕಾನೂನು ಏನು ಹೇಳುತ್ತೆ…..? ಇಲ್ಲಿದೆ ಉತ್ತರ

ಬೈಕ್‌ ಸವಾರರು ಹೆಲ್ಮೆಟ್‌ ಧರಿಸದೇ ಟ್ರಾಫಿಕ್‌ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ತಾರೆ. ಕೆಲವೊಮ್ಮೆ ಸಿಗ್ನಲ್‌ ಜಂಪ್‌ ಮಾಡುವುದು ಅಥವಾ ಡ್ರೈವಿಂಗ್‌ ಲೈಸೆಲ್ಸ್‌ ಇಲ್ಲದೇ ಇದ್ದಾಗ ಕೂಡ ಪೊಲೀಸರು ತಡೆದು ದಂಡ ಹಾಕಬಹುದು. ಟ್ರಾಫಿಕ್ ಪೊಲೀಸರು ತಪಾಸಣೆಯ ಸಮಯದಲ್ಲಿ ಬೈಕ್‌ನಿಂದ ಕೀಗಳನ್ನು ತೆಗೆದಿಟ್ಟುಕೊಳ್ತಾರೆ. ಈ ರೀತಿ ಮಾಡುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ಸಹಜ. ಮೋಟಾರು ವಾಹನ ಕಾಯ್ದೆಯ ನಿಯಮಗಳ ಪ್ರಕಾರ ಟ್ರಾಫಿಕ್ ಪೊಲೀಸರಿಗೆ ಕಾರು ಅಥವಾ ಬೈಕ್‌ನ ಕೀಗಳನ್ನು ತೆಗೆದಿಟ್ಟುಕೊಳ್ಳುವ ಹಕ್ಕಿದೆಯೇ ಎಂಬುದನ್ನು ತಿಳಿದುಕೊಳ್ಳಬೇಕು.

ನಿಯಮಗಳ ಪ್ರಕಾರ ಪೊಲೀಸರಿಗೆ ಈ ಹಕ್ಕು ಇಲ್ಲ. ಬೈಕ್‌ ಸವಾರರು ಅಥವಾ ಕಾರು ಮಾಲೀಕರು ಈ ರೀತಿ ವರ್ತಿಸಿದ ಸಂಚಾರ ಪೊಲೀಸ್ ಅಧಿಕಾರಿ ವಿರುದ್ಧ ದೂರು ದಾಖಲಿಸಬಹುದು. ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ವೀಡಿಯೊ ಕೂಡ ಮಾಡಿಟ್ಟುಕೊಳ್ಳಬಹುದು.

ಆದರೆ ಕೆಲವು ವಿಶೇಷ ಸಂದರ್ಭಗಳಲ್ಲಿ ಟ್ರಾಫಿಕ್ ಪೊಲೀಸರು ಸವಾರರ ಬೈಕಿನ ಕೀಗಳನ್ನು ತೆಗೆದುಕೊಂಡು ಹೋಗಬಹುದು. ಏಕೆಂದರೆ ಕೆಲವೊಮ್ಮೆ ತಪಾಸಣೆ ವೇಳೆ ಸವಾರರು ಓಡಿಹೋಗಿ ಸಂಚಾರ ನಿಯಮ ಉಲ್ಲಂಘಿಸಲು ಯತ್ನಿಸುತ್ತಾರೆ. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುತ್ತಿದ್ದರೆ, ತಪ್ಪಾದ ಜಾಗದಲ್ಲಿ ಪಾರ್ಕಿಂಗ್ ಮಾಡುತ್ತಿದ್ದರೆ ಅಥವಾ ಯಾವುದೇ ಗಂಭೀರ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ಪೊಲೀಸರು ಕೀಲಿಯನ್ನು ತೆಗೆದಿಟ್ಟುಕೊಳ್ಳಬಹುದು.

ಸಂಚಾರ ಪೊಲೀಸರು ಬೈಕ್‌ನ ಕೀಲಿ ತೆಗೆದುಕೊಂಡಾಗ ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಶಾಂತವಾಗಿರಿ: ಮೊದಲನೆಯದಾಗಿ ಘಟನೆಯಿಂದ ಉದ್ವೇಗಕ್ಕೊಳಗಾಗದೆ ಶಾಂತವಾಗಿರಿ ಮತ್ತು ಪೊಲೀಸರೊಂದಿಗೆ ಗೌರವಯುತವಾಗಿ ಮಾತನಾಡಿ. ಅವರು ಹೇಳುವುದನ್ನು ಎಚ್ಚರಿಕೆಯಿಂದ ಆಲಿಸಿ ಮತ್ತು ಅವರ ಸೂಚನೆಗಳನ್ನು ಅನುಸರಿಸಿ.

ಕಾರಣ ತಿಳಿಯಿರಿ: ಪೊಲೀಸರು ಯಾವ ಕಾರಣಕ್ಕೆ ಕೀಲಿ ತೆಗೆದುಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ. ನೀವು ಯಾವ ನಿಯಮವನ್ನು ಉಲ್ಲಂಘಿಸಿದ್ದೀರಿ ಎಂಬುದನ್ನೂ ಕೇಳಿ. ಇದನ್ನು ತಿಳಿದುಕೊಳ್ಳುವುದು ಮುಖ್ಯ, ಇದರಿಂದ ಮಾಡಿದ ತಪ್ಪನ್ನು ಅರ್ಥಮಾಡಿಕೊಳ್ಳಬಹುದು.

ದಂಡ ಪಾವತಿಸಿ: ಯಾವುದೇ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದರೆ ದಂಡ ಪಾವತಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಚಲನ್ ಪಡೆಯುವುದು ಕಡ್ಡಾಯ.

ಕೀಲಿಯನ್ನು ಮರಳಿ ಪಡೆಯಿರಿ: ದಂಡವನ್ನು ಪಾವತಿಸಿದ ನಂತರ  ಬೈಕ್‌ ಅಥವಾ ಕಾರಿನ ಕೀಲಿಯನ್ನು ಮರಳಿ ಪಡೆಯಿರಿ. ಪೊಲೀಸರು ಕೀಲಿಯನ್ನು ಅನ್ಯಾಯವಾಗಿ ಕಿತ್ತುಕೊಂಡಿದ್ದಾರೆ ಎಂದು ಭಾವಿಸಿದರೆ  ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು ಅಥವಾ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read