ಬಿಸಿ ನೀರು ಕುಡಿಯುವುದರಿಂದ ಇಳಿಸಬಹುದಾ ತೂಕ ? ಇಲ್ಲಿದೆ ಉತ್ತರ

ತೂಕ ಕಡಿಮೆ ಮಾಡುವುದು ಬಹಳ ಕಠಿಣ ಸವಾಲು. ಡಯಟ್‌, ವ್ಯಾಯಾಮ ಹೀಗೆ ನಾನಾರೀತಿಯಲ್ಲಿ ಪ್ರಯತ್ನಪಟ್ಟರೂ ಕೆಲವೊಮ್ಮೆ ತೂಕ ಇಳಿಸುವುದು ಕಷ್ಟವಾಗುತ್ತದೆ.

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಅತ್ಯಂತ ಸುಲಭ ವಿಧಾನವೆಂದರೆ ಬೆಚ್ಚಗಿನ ನೀರು ಸೇವನೆ. ಸಾಮಾನ್ಯವಾಗಿ ಮಹಿಳೆಯರು ತೂಕವನ್ನು ಕಳೆದುಕೊಳ್ಳಲು ಬಿಸಿನೀರನ್ನು ಕುಡಿಯುತ್ತಾರೆ. ಆದರೆ ಈ ವಿಧಾನ ನಿಜಕ್ಕೂ ಪ್ರಯೋಜನಕಾರಿಯೇ ಅನ್ನೋದನ್ನು ನೋಡೋಣ.

ಬಿಸಿನೀರು ನಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ. ಇದರಿಂದಾಗಿ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ. ಬಿಸಿನೀರು ಕುಡಿಯುವುದರಿಂದ ಚಯಾಪಚಯವೂ ಉತ್ತಮವಾಗಿರುತ್ತದೆ. ಇದು ಹಸಿವನ್ನು ಸಹ ಕಡಿಮೆ ಮಾಡುತ್ತದೆ.

ಆಹಾರ ತಿಂದ ನಂತರ ಬಿಸಿನೀರು ಕುಡಿದರೆ ಜೀರ್ಣಾಂಗ ವ್ಯವಸ್ಥೆ ಬಲವಾಗುತ್ತದೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಾದ ಮಲಬದ್ಧತೆ, ಅಸಿಡಿಟಿ ಮತ್ತು ಅಜೀರ್ಣ ಸಮಸ್ಯೆಗಳು ದೂರವಾಗುತ್ತವೆ.

ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ ನಂತರ ಬಿಸಿನೀರನ್ನು ಕುಡಿಯುವುದು ತೂಕ ನಷ್ಟಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ಬಿಸಿನೀರು ಕುಡಿದರೆ ಕೊಬ್ಬು ಕರಗುತ್ತದೆ. ಊಟದ ನಂತರ ಬಿಸಿನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಕೊಬ್ಬು ನಿಯಂತ್ರಣದಲ್ಲಿರುತ್ತದೆ.

ಉಗುರು ಬೆಚ್ಚನೆಯ ನೀರನ್ನು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಕುಡಿದರೆ, ಅದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಅತಿಯಾಗಿ ಬಿಸಿ ನೀರು ಕುಡಿಯುವುದರಿಂದ ರಕ್ತನಾಳಗಳಲ್ಲಿ ಊತ ಉಂಟಾಗುತ್ತದೆ.

ಮೆದುಳಿನ ನರಗಳಿಗೂ ತೊಂದರೆಯಾಗಿ ತಲೆನೋವಿನ ಸಮಸ್ಯೆ ಶುರುವಾಗುತ್ತದೆ. ಅತಿಯಾಗಿ ಬಿಸಿನೀರನ್ನು ಕುಡಿಯುವುದು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಮೂತ್ರಪಿಂಡಕ್ಕೆ ಹಾನಿ ಉಂಟುಮಾಡುತ್ತದೆ. ಬಿಸಿನೀರು ಕುಡಿಯುವುದರಿಂದ ರಕ್ತನಾಳಗಳಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ, ಇದು ಹಾನಿಕಾರಕವಾಗಿ ಪರಿಣಮಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read