‘ಆರೋಗ್ಯ’ ಸೇರಿದಂತೆ ಈ ಸಮಸ್ಯೆ ದೂರ ಮಾಡುತ್ತೆ ʼಕರ್ಪೂರʼ

ದೇವರ ಪೂಜೆಗೆ ಕರ್ಪೂರವನ್ನು ಬೆಳಗಲಾಗುತ್ತದೆ. ಪೂಜೆಯ ಸಮಯದಲ್ಲಿ ಕರ್ಪೂರ ಬೆಳಗುವುದ್ರಿಂದ ದೇವಾನುದೇವತೆ ಗಳು ಸಂತೋಷಗೊಳ್ತಾರೆಂದು ನಂಬಲಾಗಿದೆ. ಪೂಜೆಯ ಸಮಯದಲ್ಲಿ ಮಾತ್ರವಲ್ಲ, ಕರ್ಪೂರ ಆರೋಗ್ಯ ವೃದ್ಧಿ ಜೊತೆ ವಾಸ್ತುದೋಷ ನಿವಾರಣೆಗೆ ಸಹಕಾರಿ.

ವಾಸ್ತು ಶಾಸ್ತ್ರ ಮತ್ತು ಸಮುದ್ರ ಶಾಸ್ತ್ರ ಎರಡರಲ್ಲೂ ಕರ್ಪೂರದ ಪ್ರಯೋಜನಗಳನ್ನು ವಿವರಿಸಲಾಗಿದೆ. ಆರ್ಥಿಕ ಬಿಕ್ಕಟ್ಟನ್ನು ತೆಗೆದುಹಾಕುವಲ್ಲಿ ಕರ್ಪೂರ ಬಹಳ ಪ್ರಯೋಜನಕಾರಿ. ನಿಮ್ಮ ಮನೆಯಲ್ಲಿ ಯಾವುದೇ ರೋಗಿಯಿದ್ದರೆ, ಪ್ರತಿದಿನ ಸಂಜೆ ಕರ್ಪೂರವನ್ನು ಹಚ್ಚಬೇಕು.

ಅಪಘಾತವನ್ನು ತಪ್ಪಿಸಲು ಜನರು ಹನುಮಾನ್ ಜಿ ಫೋಟೋವನ್ನು ನೇತು ಹಾಕಿರ್ತಾರೆ. ಕರ್ಪೂರ ಇದಕ್ಕೆ ನೆರವಾಗುತ್ತದೆ. ರಾತ್ರಿಯ ಸಮಯದಲ್ಲಿ ಕರ್ಪೂರವನ್ನು ಹಚ್ಚುವ ಮೂಲಕ ಹನುಮಾನ್ ಚಾಲಿಸನ್ನು ಓದಬೇಕು. ಇದು ವಾಸ್ತು ದೋಷಗಳನ್ನು ಹೋಗಲಾಡಿಸುತ್ತದೆ.

ಮನೆ ಅಥವಾ ಭೂಮಿ ಖರೀದಿಗೆ ಬಯಸುವವರು ಮಣ್ಣಿನ ರಾಶಿ ಹಾಕಿ ಅದಕ್ಕೆ ಕರ್ಪೂರದ ಪೂಜೆ ಮಾಡಬೇಕು. ಹೀಗೆ ಮಾಡಿದ್ರೆ ನಿಮ್ಮ ಆಯ್ಕೆ ಭೂಮಿ ನಿಮಗೆ ಸಿಗುತ್ತದೆ.

ಮನೆಯಲ್ಲಿ ಆಗಾಗ ಜಗಳ, ಗಲಾಟೆ ನಡೆಯುತ್ತಿದ್ದರೆ ಕರ್ಪೂರವನ್ನು ಹಚ್ಚಿ, ಅದ್ರ ಹೊಗೆಯನ್ನು ಮನೆಗೆ ತೋರಿಸಬೇಕು.

ಮಲಗುವ ಕೋಣೆಗೆ ಕರ್ಪೂರದ ಹೊಗೆ ಹಾಕುವುದ್ರಿಂದ ಧನಾತ್ಮಕ ಶಕ್ತಿ ಮನೆ ಮಾಡುತ್ತದೆ. ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read